ಮಂಗಳೂರು: ಅಶೋಕನಗರ ದಂಟೇಲ್ ನ ಶ್ರೀ ನಾಗ ದೇವರ ಸನ್ನಿಧಿ ಮತ್ತು ಬಬ್ಬರ್ಯ -ಬಂಟ ದೈವಸ್ಥಾನದಲ್ಲಿ ನ. 30ರಿಂದ ಡಿ.4ರವರೆಗೆ ಶ್ರೀ ಬಬ್ಬರ್ಯ -ಬಂಟ ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಕ್ಷೇತ್ರದ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಾಲಿಕೆ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನ. 30ರಂದು ಸಂಜೆ 4.30ಕ್ಕೆ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಹೊರೆಕಾಣಿಕೆ ಶ್ರೀಕ್ಷೇತ್ರಕ್ಕೆ ಹೊರಡಲಿದೆ. ಡಿ. 1ರಂದು ಸಂಜೆ 5ರಿಂದ ವಾಸ್ತು ಪೂಜೆ,ನಮಸ್ಕಾರ
ಪೂಜೆ, ಇನ್ನಿತರ ಪೂಜಾ ವಿಧಿ ವಿಧಾನಗಳು ನೆರವೇರಲಿವೆ. ಡಿ. 2ರಂದು ಬೆಳಗ್ಗೆ 9ರಿಂದ ನಾಗದೇವರಿಗೆ ಆಶ್ಲೇಷಾ ಬಲಿ, ನಾಗತಂಬಿಲ, ಸೇವೆ, ಬೆಳಗ್ಗೆ 11.05ರ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಬಬ್ಬರ್ಯ-ಬಂಟ ದೈವಗಳ ಸಾನ್ನಿಧ್ಯ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಪ್ರದರ್ಶನ ನಡೆಯಲಿದೆ. ನೆರವೇರಲಿದೆ. 11.30ರಿಂದ ನಾಗದರ್ಶನ ಸೇವೆ. ಸಂಜೆ 6ರಿಂದ ಪುಣ್ಯಾಹ ಕಲಶ, ಪ್ರಾಯಶ್ಚಿತ ಹೋಮ, 25 ಕಲಶದ ಪ್ರಧಾನ ಪ್ರತಿಷ್ಠಾ ಹೋಮ, ಪವಮಾನ ಹೋಮ, ಆಶ್ಲೇಷಾ ಬಲಿ, ವಟು ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಕದ್ರಿ ಮಠದ ಶ್ರೀ ಯೋಗಿರಾಜ್ ನಿರ್ಮಲಾನಾಥ್ ಜೀ ಮತ್ತಿತರರು ಉಪಸ್ಥಿತರಿರುವರು ಎಂದರು.
ರಾತ್ರಿ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ರಾತ್ರಿ 9 ಗಂಟೆಗೆ ವಿಜಯಕುಮಾರ್ ಕೊಡಿಯಾಲಬೈಲ್ ಅವರ 'ಮಣಿಕಂಠನ ಮಹಿಮೆ' ನಾಟಕ
ಡಿ. 3ರಂದು ಸಂಜೆ 6ರಿಂದ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡಿರುವ ಗಣ್ಯರಿಗೆ ಸಮ್ಮಾನ ಹಮ್ಮಿಕೊಳ್ಳಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ರಾತ್ರಿ 10ರಿಂದ ಶ್ರೀ ಬಬ್ಬರ್ಯ-ಬಂಟ ದೈವಗಳ ನೇಮ ನಡೆಯಲಿದೆ ಎಂದರು.
0 Comments