15 ದಿನಗಳವರೆಗೆ ದೇಶವ್ಯಾಪಿ ವಿ.ಹಿಂ.ಪ ವತಿಯಿಂದ ಹಿತಚಿಂತನ ಅಭಿಯಾನ

 


ಮೂಡುಬಿದಿರೆ: ನ.6 ರಿಂದ   20ರವರೆಗೆ  ವಿಶ್ವ ಹಿಂದೂ ಪರಿಷತ್ತು ದೇಶದ ಗ್ರಾಮ ಗ್ರಾಮಗಳನ್ನು ತಲುಪಿ ಹಿಂದುಗಳನ್ನು ಸಂಪರ್ಕಿಸಿ ಒಗ್ಗೂಡಿಸುವ  ಕಾರ್ಯ ನಡೆಯಲಿದೆ. 
ವಿಶ್ವ ಹಿಂದೂ ಪರಿಷತ್ತು ಭಜರಂಗದಳ ಮೂಡುಬಿದಿರೆ ಪ್ರಖಂಡದ ವತಿಯಿಂದ 2024ಕ್ಕೆ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನೆಗೆ 60 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಷಷ್ಠಿ ಪೂರ್ತಿ ಅಂಗವಾಗಿ 15ದಿನಗಳ  ದೇಶ ವ್ಯಾಪಿ ಹಿತಚಿಂತನ ಅಭಿಯಾನವನ್ನು ಕೈಗೊಂಡಿದ್ದು ಈ ಅಭಿಯಾನಕ್ಕೆ ನಿನ್ನೆ ಮೂಡುಬಿದಿರೆಗೆ ಆಗಮಿಸಿದ ಶ್ರೀ ರಾಮ ದಿಗ್ವಿಜಯ ರಥಯಾತ್ರೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ದೇಶವ್ಯಾಪಿ ಹಿತಚಿಂತನ ಪೋಸ್ಟರ್ ನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಸರ್ವಸ್ಪರ್ಶಿ ಮಾಡುವುದಕ್ಕಾಗಿ ಸಮಾಜದ ಪ್ರತಿಯೊಂದು ಜಾತಿ, ಮತ, ಸಂಪ್ರದಾಯದ ಬಂಧುಗಳನ್ನು ಸಂಪರ್ಕಿಸಿ, ಅವರನ್ನು ಹಿಂದೂ ಸಮಾಜದ ಹಾಗೂ ರಾಷ್ಟ್ರ ಹಿತದ ಕೆಲಸದಲ್ಲಿ ಒಂದುಗೂಡಿಸುವ  ಕಾರ್ಯ ಈ ಅಭಿಯಾನದ ಮೂಲಕ ನಡೆಯಲಿದೆ.

Post a Comment

0 Comments

Advertisement