ಕುಡ್ಲ to ಕಾಶ್ಮೀರ ಸೈಕ್ಲಿಂಗ್ ಯಾತ್ರೆ: ಸೈಕಲ್ ಸವಾರರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಶುಭ ಹಾರೈಕೆ

ಜಾಹೀರಾತು/Advertisment
ಜಾಹೀರಾತು/Advertisment


 ಸೈಕ್ಲಿಂಗ್ ಕ್ಷೇತ್ರದ ಸಾಧನೆಯೊಂದಿಗೆ ಹಸಿರೀಕರಣ ಮತ್ತು ಅಂಗಾಂಗ ದಾನ'ದ ಅರಿವು ಮೂಡಿಸುವ ವಿಶೇಷ ಕಾಳಜಿಯೊಂದಿಗೆ "ಕುಡ್ಲ To ಕಾಶ್ಮೀರ ಸೈಕ್ಲಿಂಗ್ ಜಾಥ ಹೊರಟಿರುವ ಟೀಂ ಬಿಜೆಪಿ ಪಕ್ಷಿಕೆರೆ ಇದರ ಕಾರ್ಯಕರ್ತ "ಶ್ರೀನಿಧಿ ಶೆಟ್ಟಿ ಕಂಬಳಿಮನೆ ಸುರಗಿರಿ" ಹಾಗೂ ಅವರ ಗೆಳೆಯ "ಜಗದೀಶ್ ಕುಲಾಲ್ ಬೆಳ್ತಂಗಡಿ"ಯವರನ್ನು ಮಂಗಳೂರು ಪುರಭವನದಲ್ಲಿ ದ.ಕ.ಜಿಲ್ಲಾ ಸಂಸದರು,ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಶುಭ ಹಾರೈಸಿದರು.


ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುನಿಲ್ ಕುಮಾರ್, ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ ಕಾಮತ್,ಬಿಜೆಪಿ ದ.ಕ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್.ಎಂ, ಬಿಜೆಪಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಕಸ್ತೂರಿ ಪಂಜ,ಸುಧೀರ್ ಶೆಟ್ಟಿ ಕಣ್ಣೂರು,ಮಂಗಳೂರು ಮೇಯರ್ ಶ್ರೀ ಜಯಾನಂದ್ ಅಂಚನ್,ಉಪ ಮೇಯರ್ ಶ್ರೀಮತಿ ಪೂರ್ಣಿಮ ಹಾಗೂ ಕಾರ್ಪೋರೇಟರ್'ಗಳು,ಬಿಜೆಪಿ ನಾಯಕರು,ಕಾರ್ಯಕರ್ತರು ಉಪಸ್ಥಿತರಿದ್ದರು. 


ಹಾಗೂ ಬಿಜೆಪಿ ಮುಲ್ಕಿ ಮೂಡುಬಿದಿರೆ ಮಂಡಲ ವತಿಯಿಂದ ಹಳೆಯಂಗಡಿ ಹಾಗೂ ಮೂಲ್ಕಿಯಲ್ಲಿ ಬಿಜೆಪಿ ನಾಯಕರು, ಪ್ರಮುಖರು ಹಾಗೂ ಕಾರ್ಯಕರ್ತರು ಭೇಟಿಯಾಗಿ ಶುಭಕೋರಿ ಬೀಳ್ಕೊಟ್ಟರು.

Post a Comment

0 Comments