ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮುಖ್ಯಮಂತ್ರಿಗಳ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಿದಂತೆ ಮೀಸಲಾತಿ ಏರಿಕೆಯನ್ನು ಮಾಡಲಾಗಿದ್ದು ಇದರಿಂದ ಹಿಂದುಳಿದ ವರ್ಗ ಅಥವಾ ಇತರೆ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿದ್ದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
SC/ST ಮೀಸಲಾತಿಯನ್ನು ಹೆಚ್ಚಿಸಿದ್ದರಿಂದ ಹಿಂದುಳಿದ ಮತ್ತು ಇತರ ವರ್ಗಗಳ ಮೀಸಲಾತಿ ಪ್ರಮಾಣವು ಕಡಿಮೆಯಾಗಬಹುದು ಎಂಬ ಗೊಂದಲವು ಹಲವರಲ್ಲಿ ಮೂಡಿತ್ತು. ಈ ಬಗ್ಗೆ ವಿಪಕ್ಷಗಳು ಮತ್ತು ಕೆಲವು ಜಾತಿ ಸಮುದಾಯದ ಪ್ರಮುಖರು ಪ್ರಶ್ನೆಯನ್ನು ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿದ ಕೋಟ ಶ್ರೀನಿವಾಸ ಪೂಜಾರಿಯವರು SC/ST ಮೀಸಲಾತಿ ಹೆಚ್ಚಳದಲ್ಲಿ ಹಿಂದುಳಿದ ವರ್ಗದವರ ಅಥವಾ ಇತರೆ ಯಾವುದೇ ವರ್ಗದವರಿಗೂ ಅನ್ಯಾಯ ಆಗುವುದಿಲ್ಲ. ಇದು ಕೇವಲ SC/ST ಜನಾಂಗಗಳ ಮೀಸಲಾತಿ ಹೆಚ್ಚಿಸಿದ್ದಷ್ಟೇ ಇದರಿಂದ ಉಳಿದ ಜನಾಂಗಗಳ ಮೀಸಲಾತಿಗೆ ಕೊರತೆಯಾಗುವುದಿಲ್ಲ ಇದನ್ನು ನಮ್ಮ ಸರ್ಕಾರ ಎಚ್ಚರಿಕೆಯಿಂದ ಮುನ್ನಡೆಸಿಕೊಂಡು ಬರುತ್ತದೆ ಎಂಬ ಭರವಸೆಯನ್ನು ನೀಡಿದರು.
0 Comments