ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಅಡಿಕೆ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಔಷಧೀಯ ಗುಣವುಳ್ಳ ಅಡಿಕೆಯ ಸೇವನೆ ಆರೋಗ್ಯಕ್ಕೆ ಉತ್ತಮ. ಅಡಿಕೆ ಗಿಡಗಳಿಗೆ ಸುದೀರ್ಘವಾದ ಭವಿಷ್ಯವಿದೆ. 2-3 ಅಡಿ ಹೊಂಡ ಮಾಡಿ ವೈಜ್ಞಾನಿಕ ರೀತಿಯಲ್ಲಿ ಅಡಿಕೆ ಗಿಡಗಳನ್ನು ನೆಡಬೇಕು. ಬೇಸಿಗೆ ಕಾಲದಲ್ಲಿಯೂ ಮಿತವಾಗಿ ನೀರನ್ನು ನೀಡಬೇಕು. ಗಿಡಗಳಿಗೆ ಕ್ಯಾಲ್ಸಿಯಂ ಬೇಕಾಗಿರುವುದರಿಂದ ಪ್ರತಿವರ್ಷ ಸುಣ್ಣವನ್ನು ನೀಡಬೇಕು. ಸುಣ್ಣ ನೀಡಿದ ಮೂರು ವಾರಗಳ ನಂತರ ಗೊಬ್ಬರವನ್ನು ಹಾಕಬೇಕು ಎಂದು ಹೇಳಿದ ಅವರು ಅಡಿಕೆಯ ಜತೆಗೆ ಮಿಶ್ರಬೆಳೆಗಳನ್ನು ಮಾಡಿದರೆ ಮಾಡಬೇಕು ಹಾಗೂ ನೀರಿನ ಜತೆಗೆ ಗಂಜಳವನ್ನು ನೀಡುವುದರಿಂದ ಉತ್ತಮ ಪೋಷಕಾಂಶಗಳು ದೊರಕುವುದರಿಂದ ಅಡಿಕೆ ಬೆಳೆ ಉತ್ತಮ ಫಸಲನ್ನು ನೀಡುತ್ತದೆ ಎಂದರು.
ಕೀಟ ಶಾಸ್ತ್ರಜ್ಞ ಡಾ.ಸಚಿನ್ ಅವರು ಕೃಷಿಗೆ ಕೀಟಗಳಿಂದ ಆಗುವ ರೋಗಗಳ ಬಗ್ಗೆ ಮಾಹಿತಿ ನೀಡಿ ಅಡಿಕೆ ಬರುವ ಕೊಳೆ ರೋಗ, ಕಂಡೆ ಹುಳ ರೋಗ, ನುಸಿಗಳಿಂದ ಬರುವ ರೋಗ, ಸಿಂಗಾರ ತಿನ್ನುವ ಹುಳುಗಳು, ದುಂಬಿಗಳಿಂದ ಬರುವ ರೋಗಗಳನ್ನು ತಡೆಗಟ್ಟಲು ಗಿಡಗಳ ಮಧ್ಯೆ ಅಂತರವನ್ನು ಕಾಯ್ದುಕೊಳ್ಳಬೇಕು ಹಾಗೂ ಸುಣ್ಣದ ನೀರು ಮತ್ತು ಮೈಲುತುತ್ತನ್ನು ಮಿಕ್ಸ್ ಮಾಡಿ ಬಳಸಬೇಕೆಂದು ಸಲಹೆ ನೀಡಿದರು.
ದೀಪಕ್ ಕೊಳಕೆ ರೈತಜನ್ಯದ ಬಗ್ಗೆ, ಗೊದ್ರೇಜ್ ಕಂಪನಿಯ ಮಾಹಿತಿ ನೀಡಿದರು.
ಕೊನ್ನೆಪದವು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸಚ್ಚೀಂದ್ರ,ಕಥೋಲಿಕ್ ಸಭಾದ ಸೇಲ್ಸ್ ಮೇನೇಜರ್ ಪ್ರಸಾದ್ ಮೋಹಿತೇ ಪಶು ಆಹಾರದ ಬಗ್ಗೆ ಮಾಹಿತಿ ಉಪಾಧ್ಯಕ್ಷೆ ಸೆಲ್ಲಿ ನಝ್ರತ್, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಸಾಂಗವಿ, ಮೂಡುಬಿದಿರೆ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ವೈ.ಎಸ್. ನಿಂಗನಗೌಡ್ರ ಉಪಸ್ಥಿತರಿದ್ದರು.
ಕಥೋಲಿಕ್ ಸಭಾದ ಅಧ್ಯಕ್ಷೆ ಲವೀನಾ ಪಿಂಟೋ ಸ್ವಾಗತಿಸಿದರು. ಕೊನ್ನೆ ಪದವು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಿಯೋ ವಾಲ್ಟರ್ ನಝ್ರತ್ ಕಾರ್ಯಕ್ರಮ ನಿರೂಪಿಸಿದರು.
0 Comments