ದೈವಸ್ಥಾನದಲ್ಲಿ ಅಖಂಡ ಭಾರತ ಸಂಕಲ್ಪ:ಗರಡಿಯಲ್ಲಿ ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆಯ ಪಣಪಿಲ-ಅಳಿಯೂರು-ದರೆಗುಡ್ಡೆ ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮದೈವ ಪಣಪಿಲ ಕಲ್ಲೇರಿ ಕುಕ್ಕಿನಂತಾಯ ದೈವಸ್ಥಾನ ಹಾಗೂ ಅಳಿಯೂರು ಉಮಲತ್ತಡೆ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಪಣಪಿಲ ಕಲ್ಲೇರಿ ಕುಕ್ಕಿನಂತಾಯ ದೈವಸ್ಥಾನದಲ್ಲಿ ಅಖಂಡ ಭಾರತವನ್ನು ನಿರ್ಮಿಸಿ ದೀಪ ಬೆಳಗಿಸುವ ಮೂಲಕ ರಾಷ್ಟ್ರಭಕ್ತಿಯೊಂದಿಗೆ ಹಬ್ಬವನ್ನು ಆಚರಿಸಿದರು. 


ಪ್ರತಿವರ್ಷವೂ ಪಣಪಿಲ ಕಲ್ಲೇರಿ ಶ್ರೀ ಕುಕ್ಕಿನಂತಾಯ ದೈವಸ್ಥಾನ ಮತ್ತು ಅಳಿಯೂರು ಉಮಲತ್ತಡೆ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದು ಕಳೆದ ಬಾರಿ ಈ ಕ್ಷೇತ್ರಗಳು ಜೀರ್ಣೋದ್ದಾರಗೊಂಡಿತ್ತು. ಜೀರ್ಣೋದ್ದಾರಗೊಂಡ ನಂತರ ಇದೇ ಮೊದಲ ಬಾರಿ ಕ್ಷೇತ್ರಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದು ಕಲ್ಲೇರಿ ಶ್ರೀ ಕುಕ್ಕಿನಂತಾಯ ದೈವಸ್ಥಾನ ಮತ್ತು ಉಮಲತ್ತಡೆ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಗುತ್ತು ಬರ್ಕೆ ಮತ್ತು ಚಾಕಿರಿಯವರು ಸಹಿತ ಭಕ್ತಾದಿಗಳೊಂದಿಗೆ ಸೇರಿ ಆಡಳಿತ ಸಮಿತಿಯವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.



Post a Comment

0 Comments