ಯಕ್ಷ ವೇದಿಕೆಯಲ್ಲಿ ಯಕ್ಷ ವೇಷ ಧರಿಸಿದ ಆರೋಗ್ಯ ಸಚಿವರು:ಕರಾವಳಿ ಗಂಡುಕಲೆಗೆ ಹೆಲ್ತ್ ಮಿನಿಸ್ಟರ್ ಫಿದಾ

ಜಾಹೀರಾತು/Advertisment
ಜಾಹೀರಾತು/Advertisment


 ಉತ್ತರ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯದ ಆರೋಗ್ಯ ಸಚಿವರಾದ ಡಾ. ಸುಧಾಕರ್ ರವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಇದರ ಸಭಾ ಕ್ಷೇತ್ರದ ಶಾಸಕರಾದ ಸುನಿಲ್ ನಾಯಕ್ ರವರ ಮನೆಯಲ್ಲಿ ನಡೆದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಯಕ್ಷಗಾನ ಬಯಲಾಟದಲ್ಲಿ ಭಾಗವಹಿಸಿದ ಡಾ. ಸುಧಾಕರ್ ಯಕ್ಷಗಾನ ಕಲೆಗೆ  ಮನಸೋತು ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿದರು.



ಮಾತ್ರವಲ್ಲದೆ ತಾನೂ ಯಕ್ಷ ವೇಷಧಾರಿಯಾಗಿ  ವೇದಿಕೆಯಲ್ಲಿ ಮಿಂಚಿದ್ದು ಎಲ್ಲರ ಗಮನ ಸೆಳೆಯಿತು. ವೇದಿಕೆಗೆ ತೆರಳಿ ಯಕ್ಷಗಾನ ಕಲಾವಿದರಿಂದ ಯಕ್ಷ ವೇಶವನ್ನು ಸ್ವೀಕರಿಸಿ ಅದನ್ನು ಧರಿಸಿ ಸಂತಸಪಟ್ಟ ಕುತೂಹಲಕಾರಿ ಘಟನೆ ಶಾಸಕ ಸುನಿಲ್ ನಾಯಕ್ ರವರ ಮನೆಯಲ್ಲಿ ನಡೆಯಿತು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ನಾಯಕ್ ರವರು ಆರೋಗ್ಯ ಸಚಿವರಿಗೆ ಸಾಥ್ ನೀಡಿದರು.

Post a Comment

0 Comments