ದೈವಾರಾಧನೆ ಹಿಂದೂಗಳ ಪವಿತ್ರ ಆರಾಧನಾ ಪದ್ಧತಿ:ನಟ ಚೇತನ್ ಹೇಳಿಕೆಗೆ ಸಚಿವ ಕೋಟ ವಿರೋಧ


ದೈವಾರಾಧನೆ ಹಿಂದುತ್ವದ ಒಂದು ಭಾಗ.ಹಿಂದೂ ಧರ್ಮೀಯರೇ ದೈವಾರಾಧನೆಯನ್ನು ಆಚರಿಸುವುದು. ದಲಿತ, ಹಿಂದುಳಿದ ವರ್ಗದ, ಪರಿಶಿಷ್ಟ ಜಾತಿ,ಬುಡಕಟ್ಟು ಸಮಾಜ ಇವರೆಲ್ಲರೂ ದೈವಾರಾಧಕರೇ ಆಗಿದ್ದಾರೆ. ಇವರೆಲ್ಲರೂ ದೈವಾರಾಧಕರಾಗಿದ್ದು ಇವರೆಲ್ಲರೂ ಹಿಂದೂಗಳು ಆಗಿದ್ದಾರೆ. ಹೀಗಾಗಿ ಹಿಂದುತ್ವ ಬೇರೆಯಲ್ಲ ದೈವಾರಾಧಕರು ಬೇರೆಯಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿಕೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಟ ಚೇತನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಯಾರು ಏನು ಹೇಳಿದ್ದಾರೆ ಎಂಬುದು ವಿಷಯ ಅಲ್ಲ ನಮ್ಮ ಅಭಿಪ್ರಾಯ ಮಾತ್ರ ವಿಷಯವಾಗಿದೆ. ಹಿಂದೂ ಧರ್ಮದ ಅವಿಭಾಜ್ಯ ಅಂಗವೇ ದೈವಾರಾಧನೆ. ಇದನ್ನು ಬೇರ್ಪಡಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ. 

Post a Comment

0 Comments

Advertisement