ಅಕ್ಟೋಬರ್ 25ರಂದು ದೇವರ ದರ್ಶನಕ್ಕಿಲ್ಲ ಅವಕಾಶ

 


 ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 25 ರಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲವೆಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ. ಸೂರ್ಯಗ್ರಹಣದ ಪ್ರಯುಕ್ತ ಅಂದು ಮಧ್ಯಾಹ್ನ ಗಂಟೆ 2.30 ರಿಂದ ರಾತ್ರಿ 7.30 ರ ವರೆಗೆ ದೇವರ ದರ್ಶನಕ್ಕೆ ಅಕ್ಟೋಬರ್ 25 ರಂದು ಸಂಜೆ ಗಂಟೆ 5.11ಕ್ಕೆ ಗ್ರಹಣ ಸ್ವರ್ಶವಾಗಲಿದ್ದು, ಸಂಜೆ 6.28ಕ್ಕೆ ಗ್ರಹಣ ಮೋಕ್ಷವಾಗಲಿದೆ. ಅಕ್ಟೋಬರ್ 26 ರಿಂದ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ ಎಂದು ತಿಳಿಸಲಾಗಿದೆ.

Post a Comment

0 Comments

Advertisement