ಮೂಡುಬಿದಿರೆ ತಾಲೂಕಿನ ಪುಚ್ಚಮೊಗರು ಅಣೆಕಟ್ಟು ಬಳಿ ಖಚಿತ ಮಾಹಿತಿ ಮೇರೆಗೆ ಜುಗಾರಿ ಅಡ್ಡೆಯೊಂದಕ್ಕೆ ಮಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಜುಗಾರಿ ಆಟದಲ್ಲಿ ತೊಡಗಿಕೊಂಡಿದ್ದ 9 ಮಂದಿಯನ್ನು 22,000 ರೂ. ನಗದು ಸಹಿತ ವಶಕ್ಕೆ ತೆಗೆದುಕೊಂಡ
ಪ್ರಕರಣ ನಡೆದಿದೆ.
ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳ ಹಿಂದೆ ಮೂಡುಬಿದಿರೆ ಪೊಲೀಸರು ಮಂಗಳೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಇದೇ ಸ್ಥಳಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕುರುಹು ಗೋಚರಿಸಿರಲಿಲ್ಲ ಎನ್ನಲಾಗಿದೆ.
0 Comments