ಇಂದು ಮತ್ತೆ ನಾಳೆ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ-2022"ಕ್ಕೆ ಚಾಲನೆ


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನ  ವಿ.ಎಸ್.ಆಚಾರ್ಯ ವೇದಿಕೆಯಲ್ಲಿ ಎರಡು ದಿನ ನಡೆಯುವ  12ನೇ  ಉದ್ಯೋಗ ಮೇಳ "ಆಳ್ವಾಸ್ ಪ್ರಗತಿ-2022"ದ ಅಧ್ಯಕ್ಷತೆ ವಹಿಸಿ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಚಾಲನೆಯನ್ನು ನೀಡಿದರು.

 ನಂತರ ಮಾತನಾಡಿದ ಅವರು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸುವಂತಹ ಕೆಲಸ ಉದ್ಯೋಗಮೇಳಗಳಿಂದ ಆಗುತ್ತದೆ. ಒಂದೇ ಜಾಗಕ್ಕೆ ಹಲವು ಕಂಪನಿಗಳನ್ನು ಕರೆಸಿ ಉದ್ಯೋಗವನ್ನು ಕಲ್ಪಿಸುವಂತಹ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಳೆದ 12 ವರುಷಗಳಿಂದ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಮತ್ತು ಈ ಸಂಸ್ಥೆಯು ನನ್ನ  ಕ್ಷೇತ್ರದಲ್ಲಿರುವುದು ನನಗೆ ಹೆಮ್ಮೆ ಎಂದರು.

ಸನ್ಮಾನ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯರಾಮ್ ಎಸ್.,ಮಹಮ್ಮದ್ ಅಶ್ರಫ್, ವೆಂಕಟರಮಣ ಪಿ. ಅವರನ್ನು ಸನ್ಮಾನಿಸಲಾಯಿತು.

 ಅದಾನಿ ಗ್ರೂಫ್ ನ ಕಿಶೋರ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಉಪನ್ಯಾಸಕ ವೇಣುಗೋಪಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.






Post a Comment

0 Comments

Advertisement