ಧಗಧಗಿಸಿತು ಚಲಿಸುತ್ತಿದ್ದ ಬಸ್ : 18 ಮಂದಿ ಸಜೀವ ದಹನ

 

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಚಲಿಸುತ್ತಿದ್ದ ಬಸ್ ಏಕಾಏಕಿ ಹೊತ್ತಿ ಉರಿದಿದ್ದು ಬಸ್ಸಿನಲ್ಲಿ ಸುಮಾರು 18 ಜನ ಸಜೀವ ದಹನವಾಗಿದ್ದಾರೆ.

 10ಕ್ಕೂ ಹೆಚ್ಚು ಮಂದಿ ಇದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಸದೀಯ ಆರೋಗ್ಯ ಕಾರ್ಯದರ್ಶಿ ಸಿರಾಜ್ ಖಾಸಿಂ ಮಾಹಿತಿ ನೀಡಿದ್ದಾರೆ.

ಇನ್ನು ಬಸ್ ನಲ್ಲಿ 35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದವರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಅವರೆಲ್ಲ ಖಾಸಗಿ ವಾಹನದ ಮೂಲಕ ದಾದು ಜಿಲ್ಲೆಗೆ ವಾಪಸ್ ಆಗುವಂತೆ ಜಂಶೋರೊ ಜಿಲ್ಲಾ ಕಮಿಷನರ್ ಆಸಿಫ್ ಜಮೀಲ್ ಹೇಳಿದ್ದಾರೆ.

ಬಸ್ ನ ಹಿಂಭಾಗದಲ್ಲಿ ಬೆಂಕಿ ಕೆನ್ನಾಲಿಗೆ ಬಸ್ ಸಂಪೂರ್ಣ ಸುತ್ತು ಕರಕಲಾಗಿದೆ ಈ ವೇಳೆ ಕೆಲವರು ಬಸ್ ನಿಂದ ಜಿಗಿದು ಪ್ರಾಣ ಉಳಿಸಿದೆ.ಇನ್ನು ಬೆಂಕಿಯ   ಕೆನ್ನಾಲಿಗೆ ಬಸ್ ಸಂಪೂರ್ಣ ಸುಟ್ಟು ಕರಗಲಾಗಿತ್ತು. ಪ್ರಯಾಣಿಕರ ಮೃತದೇಹ

ಗುರುತು ಸಿಗದಂತಾಗಿವೆ.ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಈವರೆಗೆ  ತಿಳಿದುಬಂದಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


 

Post a Comment

0 Comments

Advertisement