ಭಾರತೀಯ ಸೇನಾ ಪಡೆಯ ಮುಖ್ಯಸ್ಥರಾಗಿ ಜನರಲ್ ಅನಿಲ್ ಚೌಹಾಣ್ ಅಧಿಕಾರ ಸ್ವೀಕಾರ

ಜಾಹೀರಾತು/Advertisment
ಜಾಹೀರಾತು/Advertisment

ನವದೆಹಲಿ : ಭಾರತೀಯ ಸೇನಾ ಪಡೆಗಳ ಮುಖ್ಯಸ್ಥಹುದ್ದೆಗೆ ನೇಮಕಗೊಂಡಿದ್ದ ಲಿಫ್ಟಿನೆಂಟ್ ಜನರಲ್ಅನಿಲ್ ಚೌಹಾಣ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ದೆಹಲಿಯ ಸೌತ್ ಬ್ಲಾಕ್ ನಲ್ಲಿ ಸಿಡಿಎಸ್ ಚೌಹಾಣ್ ಅವರು ಗೌರವಂದನೆ ಸ್ವೀಕರಿಸಿದರು .

ಬಳಿಕ ಮಾತನಾಡಿದ ಅವರು ಭಾರತೀಯ ಸೇನಾ ಪಡೆಗಳಿಗೆ ಕೃತಜ್ಞತೆ ಸಲ್ಲಿಸುತ್ತಾ, ಭಾರತೀಯ ಸೇನಾ ಪಡೆಯ ಅತ್ಯುನ್ನತ ಹೊಣೆಗಾರಿಕೆಯನ್ನು ಹೊರಲು ತುಂಬಾ ಹೆಮ್ಮೆಯಾಗುತ್ತದೆ. ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥನಾಗಿ ಎಲ್ಲರ ನಿರೀಕ್ಷೆಯನ್ನು

ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಆರ್ಮಿ ಚೀಫ್ ಜನರಲ್ ಮನೋಜ್ ಪಾಂಡೆ, ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ವಿ.ಆರ್ ಚೌಧರಿ, ನೌಕಾಪಡೆಯ ಉಪ ಮುಖ್ಯಸ್ಥ ಅಡ್ಮಿರಲ್ ಎಸ್.ಎನ್ ಫೋರ್ಮಡೆ ಮತ್ತು ಏರ್ ಮಾರ್ಷಲ್ ಬಿ .ಆರ್ ಕೃಷ್ಣ ಉಪಸ್ಥಿತರಿದ್ದರು.


Post a Comment

0 Comments