ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ.) ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸಹಕಾರಿಯ ಅಧ್ಯಕ್ಷರಾದ ಸತೀಶ್ ವಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಹೊಟೇಲ್ ಶ್ರೀಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಸೆ. 24ರಂದು ಜರುಗಿತು.
ಉಪಾಧ್ಯಕ್ಷ ವಿನಯ ಹೆಗ್ಡೆ, ನಿರ್ದೇಶಕರಾದ ಎಸ್. ಪ್ರವೀಣ್ ಕುಮಾರ್, ಮಹಾವೀರ ಜೈನ್, ಮಹಾವೀರ ಮುದ್ಯ, ಲ್ಯಾನ್ಸಿ ಡೇಸಾ, ಫ್ರಾಂಕಿ ಎಲ್. ಪಿಂಟೋ, ರಕ್ಷಿತ್ ಆರ್., ಅರುಣ್ ಎನ್. ಶೆಟ್ಟಿ, ಸದಾನಂದ ಪೂಜಾರಿ, ಶ್ರೀಮತಿ ಬಬಿತಾ ಆರ್. ಶೆಟ್ಟಿ, ಶ್ರೀಮತಿ ಶಾರದ ಸುವರ್ಣ ಉಪಸ್ಥಿತರಿದ್ದರು.
ಸಹಕಾರಿಯು 6450 ಸದಸ್ಯರನ್ನು ಹೊಂದಿದ್ದು, 38.13ಲಕ್ಷ ಸದಸ್ಯ ಪಾಲು ಬಂಡವಾಳ ಹೊಂದಿದೆ. 12.64ಕೋಟಿ ರೂಪಾಯಿ ವರದಿ ವರ್ಷದ ದುಡಿಯುವ ಬಂಡವಾಳವಾಗಿದೆ. ಸುಮಾರು 11.15ಕೋಟಿ ಸದಸ್ಯ ಠೇವಣಿ ಪಡೆದುಕೊಂಡಿದ್ದು ನೀಡಿರುವ ಸಾಲದಲ್ಲಿ 99.73ಶೇ. ವಸೂಲಾತಿಯಾಗಿದೆ.
ಪ್ರಸಕ್ತ ವರ್ಷ ಎಲ್ಲಾ ಸದಸ್ಯರಿಗೂ ಶೇ. 15 ಲಾಭಾಂಶ ವಿತರಣೆ ನಡೆಸಲಾಗಿದೆ. 29.21ಲಕ್ಷ ರೂ. ಲಾಭ ಪಡೆದುಕೊಂಡಿದೆ.
ಕೇಂದ್ರ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವುದು, ಸ್ವ-ಸಹಾಯ ಸಂಘಗಳನ್ನು ಹೆಚ್ಚಿಸುವುದು, ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ನೂತನ ಶಾಖೆ ತೆರೆಯುವುದನ್ನು ಪ್ರಕಟಿಸಲಾಯಿತು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆ.ಕೆ. ವರದಿ ಮಂಡಿಸಿದರು. ನಾರಾವಿ ಶಾಖಾ ವ್ಯವಸ್ಥಾಪಕ ಸತೀಶ್ ಕೆ. ನಿರೂಪಿಸಿದರು. ರಾಜವರ್ಮ ಜೈನ್ ದನ್ಯವಾದವಿತ್ತರು.
0 Comments