ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ ಪೂಜಿಸಲ್ಪಟ್ಟ ಶ್ರೀ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯು ಭಾನುವಾರ ಸಂಜೆ ೪. ೩೦ಕ್ಕೆ ನಿಶ್ಮಿತಾ ಬಳಯಿಂದ ಹೊರಡಲಿರುವುದರಿಂದ ಮೂಡುಬಿದಿರೆ ಪೇಟೆಯಲ್ಲಿ ವಾಹನ ಸಂಚಾರ ರಸ್ತೆಯನ್ನು ತಾತ್ಕಾಆಕವಾಗಿ ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕರು ಮೆರವಣಿಗೆ ಹೊರಟು, ಸಾಗುವ ಸಂದರ್ಭ ತಮ್ಮ ವಾಹನಗಳನ್ನು ಪೇಟೆಯೊಳಗೆ ತರದೆ, ಸ್ವರಾಜ್ಯ ಮೈದಾನ, ತಾಲೂಕು ಆಡಳತ ಸೌಧ, ಜ್ಯೋತಿನಗರ ಸರಕಾರಿ ಶಾಲಾವರಣ, ಕನ್ನಡಭವನ, ಸ್ವಿಮ್ಮಿಂಗ್ ಪೂಲ್ ಬಳಿ ಸಹಿತ ಸ್ಥಳಾವಕಾಶ ಇರುವಲ್ಲಿ ಪಾರ್ಕ್ ಮಾಡಬೇಕು ಮತ್ತು ಬಸ್ಸುಗಳೆಲ್ಲ ಊರ ಹೊರಗಿನ ರಸ್ತೆಗಳನ್ನು ಬಳಸಿ ಒಳಬರುವ, ಹೊರಹೋಗುವ ಮೂಲಕ ಸುಗಮ ಸಾರಿಗೆ ವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್ ವಿನಂತಿಸಿದ್ದಾರೆ.
ಬೆಳಗ್ಗೆ ಸಮಯ ೧೦ರಿಂದ ೪ ರವರೆಗೆ ಹಳೆ ಪೊಲೀಸ್ ಠಾಣಿಯಿಂದ ನಿಶ್ಮಿತಾ ಸರ್ಕಲ್ ವರೆಗೆ ಮುಖ್ಯ ರಸ್ತೆಯಲ್ಲಿ ಸಂಚಾರ ನಿಷೇಧ, ಅಮಶ್ರೀ ಟಾಕೀಸ್ ರಸ್ತೆ ದ್ವಿಮುಖ ರಸ್ತೆಯಾಗಿ ಮಾರ್ಪಾಡು, ಮಂಗಳೂರು ಕಡೆಯಿಂದ ಕಾರ್ಕಳ, ಕೊಡ್ಯಡ್ಕ ಕಡೆಗೆ ಹೊಗುವ ವಾಹನಗಳು ರಿಂಗ್ ರೋಡ್ ಮೂಲಕ ಸಂಚಾರ, ಕಾರ್ಕಳ-ಕೊಡ್ಯಡ್ಕ ಕಡೆಯಿಂದ ಮಂಗಳೂರು-ಮೂಲ್ಕಿ ಕಡೆಗೆ ಹೋಗುವ ವಾಹನಗಳು ರಿಂಗ್ ರೋಡ್ ಮೂಲಕ ಇನ್ನರ್ ವೀಲ್ ಸರ್ಕಲ್. ಇಳಿಸಿ, ಹತ್ತಿಸಿಕೊಂಡು ಹೋಗುವುದು. ಮಂಗಳೂರು ಕಡೆಯಿಂದ ವೇಣೂರು ಸಿದ್ಧಕಟ್ಟೆಗೆ ಹೋಗುವ ವಾಹನಗಳು ನಿಶ್ಮಿತಾ ಸರ್ಕಲ್-ಪುರಸಭೆ –ಮಾಸ್ತಿಕಟ್ಟೆ ಜ್ಯೋತಿನಗರದ ಮೂಲಕ ಸಂಚಾರ, ಬಿಸಿರೋಡ್ ಮತ್ತು ವೇಣೂರು ಕಡೆಯಿಂದ ಮೂಡುಬಿದಿರೆಗೆ ಬರುವ ವಾಹನಗಳು ಲಾಡಿಕ್ರಾಸ್‌ನಲ್ಲಿ ಜನರನ್ನು ಇಳಿಸಿ, ಹತ್ತಿಸಿಕೊಂಡು ಹಿಂದಕ್ಕೆ ಹೋಗುವುದು.
ಸಂಜೆ ೪-೧೦ರವರೆಗೆ ಮಂಗಳೂರು ಕಡೆಯಿಂದ ವೇಣೂರು ಸಿದ್ದಕಟ್ಟೆ ಕಡೆಗೆ ಹೋಗುವ ವಾಹನಗಳು ವಿದ್ಯಾಗಿರಿ-ಮಾಸ್ತಿಕಟ್ಟೆ ರೋಡ್-ಬಗ್ರು ಗುಡ್ಡೆ-ಪೇಪರ್ ಮಿಲ್ಸ್ ಶಾಂತಿನಗರ-ಕೊಡಂಗಲ್ಲು ಮೂಲಕ ಸಂಚರಿಸುವುದು. ಬಿ.ಸಿ.ರೋಡ್ ಮತ್ತು ವೇಣೂರು ಕಡೆಯಿಂದ ಕಾರ್ಕಳ ಕಡೆಗೆ ಹೋಗುವ ವಾಹನಗಳು ಶಾಂತಿನಗರ ಕೊಡಂಗಲ್ಲು - ಕೋಟೆಬಾಗಿಲು-ಶಿರ್ತಾಡಿ ಕ್ರಾಸ್ ಆಲಂಗಾರು ಜಂಕ್ಷನ್ ಮೂಲಕ ಸಂಚರಿಸುವುದು., ಮುಲ್ಕಿ-ಮಂಗಳೂರು-ಕೊಡ್ಯಡ್ಕ ಕಡೆಗೆ ಸಂಚರಿಸುವ ವಾಹನಗಳು ಪೇಪರ್ ಮಿಲ್ಸ್ ಬಳಸಿ ಬೊಗುಗುಡ್ಡೆ ಮಾಸ್ತಿಕಟ್ಟೆ-ಪುರಸಭೆ-ನಿಶ್ಮಿತಾ ಸರ್ಕಲ್ ಇನ್ನ ವೀಲ್ ಸರ್ಕಲ್ ಮೂಲಕ ಸಂಚರಿಸಬೇಕೆಂದು ಪೊಲೀಸ್ ಠಾಣೆಯ ಪತ್ರಿಕಾ ಪ್ರಕಟ ನೆಯಲ್ಲಿ ತಿಳಿಸಿದ್ದಾರೆ.
0 Comments