ತೋಟಗಾರಿಕಾ ಬೆಳೆಗಳ ಕೀಟ ಬಾದೆಯ ಬಗ್ಗೆ ರೈತ ವಿಜ್ಞಾನಿ ಸಂವಾದ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:  ಭಾರತೀಯ  ಕಿಸಾನ್ ಸಂಘ (ರಿ)  ತಾಲೂಕು ಮತ್ತು ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ತೋಟಗಾರಿಕಾ ದಿನಾಚರಣೆಯ ಪ್ರಯುಕ್ತ ತೆಂಗು ಅಡಿಕೆ ಗೇರು ಮತ್ತಿತರ ತೋಟಗಾರಿಕಾ ಬೆಳೆಗಳ ಕೀಟ ಬಾದೆಯ ಬಗ್ಗೆ ರೈತ ವಿಜ್ಞಾನಿ ಸಂವಾದ  ಕಾರ್ಯಕ್ರಮವು  ಸೋಮವಾರ  ಶ್ಯಾಮಿಲಿ  ಸಭಾಂಗಣದಲ್ಲಿ ಶಾಸಕ   ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.   

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿಕರಿಗೆ ಕುಮ್ಕಿ ಹಕ್ಕು ಸಿಗುವ ಬಗ್ಗೆ ತಾನು ವಿಧಾನ ಸಭೆಯಲ್ಲಿ ಮಾತನಾಡುತ್ತೇನೆಂದು ಈ ಬಗ್ಗೆ ಕೃಷಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಕಿಸಾನ್ ಸಂಘ ಮಾಡಬೇಕೆಂದು ಕರೆಯನ್ನು ನೀಡಿದರು.

ಭಾರತೀಯ ಕಿಸಾನ್ ಸಂಘ    ಜಿಲ್ಲಾಧ್ಯಕ್ಷ  ಹಾಗೂ ನ್ಯಾಯವಾದಿ ಶಾಂತಿಪ್ರಸಾದ್ ಹೆಗಡೆ ಅಧ್ಯಕ್ಷತೆ  ವಹಿಸಿ ಮಾತನಾಡಿ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಮೂಡಬಿದಿರೆಯಲ್ಲಿ ಕುಮ್ಕಿ ಹಕ್ಕಿನ ಬಗ್ಗೆ  ರೈತ ಹೋರಾಟವನ್ನು ನಡೆಸಲಾಗುವುದು ಎಂದು  ತಿಳಿಸಿದರು.

ಕಾರ್ಯಕ್ರಮದಲ್ಲಿ   ಕರ್ನಾಟಕ ದಕ್ಷಿಣ ಪ್ರಾಂತ  ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ   ನಾರಾಯಣ ಸ್ವಾಮಿ   ಹಾಗೂ ಭಾರತೀಯ ಕಿಸಾನ್ ಸಂಘ     ಪ್ರಧಾನ ಕಾರ್ಯದರ್ಶಿ ವಸಂತ ಭಟ್ ಪಯ್ಯಾಡೆ , ಸಂಪನ್ಮೂಲ ವ್ಯಕ್ತಿ ಡಾಕ್ಟರ್ ಭವಿಷ್ಯ ,   ವಿಜ್ಞಾನಿ ರಾಜಕುಮಾರ್  ಕೆ, ಮಂಗಳೂರು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಪ್ರವೀಣ್, ಯುಗೇಂದ್ರ  ಮೂಡುಬಿದಿರೆ ಮತ್ತಿತರರು ಉಪಸ್ಥಿತರಿದ್ದರು.

ಎಸ್ ಬಿ ಐ ವಿಮ ಕಂಪನಿಯ ವತಿಯಿಂದ ರೈತರಿಗೆ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮವನ್ನು ಪ್ರವೀಣ್ ಭಂಡಾರಿ ಅಲಂಗಾರು ನಿರ್ವಹಿಸಿದರು.

Post a Comment

0 Comments