ನಿಡ್ಡೋಡಿ ಮನೆಯಲ್ಲಿ ಪತ್ತೆಯಾದ ಎರಡು ತಲೆ ಹಾವು

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:  ಮೂಡುಬಿದಿರೆ ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಮನೆಯೊಂದರಲ್ಲಿ ಎರಡು ತಲೆಯ ಹಾವು ಪತ್ತೆಯಾಗಿ ಕೆಲ ಕಾಲ ಮನೆ ಮಂದಿಯನ್ನು ಆತಂಕಕ್ಕೀಡು ಮಾಡಿದೆ.

ನಿಡ್ಡೋಡಿಯ ರಾಜೇಶ್ ಎಂಬವರ ಮನೆಯಲ್ಲಿ ಎರಡು ತಲೆಯ ಹಾವು ಪತ್ತೆಯಾಗಿದ್ದು, ಕೂಡಲೇ ಉರಗ ಪ್ರೇಮಿ ವಿನೇಶ್ ಪೂಜಾರಿ ನಿಡ್ಡೋಡಿಯವರಿಗೆ ವಿಷಯ ತಿಳಿಸಲಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ವಿನೇಶ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಎರಡು ತಲೆಯ ಹಾವು ಇತ್ತೀಚಿನ ದಿನಗಳಲ್ಲಿ ಅತೀ ವಿರಳವಾಗಿದ್ದು, ಈ ಹಾವು ಹೆಚ್ಚು ಬೆಲೆ ಬಾಳುತ್ತದೆ ಎನ್ನುವ ವದಂತಿಯೊಂದು ಹಬ್ಬಿದ ಕಾರಣದಿಂದಲೇ ಹಾವನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಇದರ ಸಂತತಿ ಕಡಿಮೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.


ಕಳೆದ ಕೆಲ ವರ್ಷಗಳ ಹಿಂದೆ ಈ ಹಾವಿಗೆ ಬೆಲೆ ಕೊಡುತ್ತಾರೆ ಹಾಗೂ ಕೊಂಡುಕೊಳ್ಳುತ್ತಾರೆ ಎನ್ನುವ ವಿಚಾರವೊಂದು ಹರಿದಾಡಿದ ಹಿನ್ನೆಲೆಯಲ್ಲಿ ಹಾವುಗಳ ಬೇಟೆ ನಡೆದಿದ್ದು, ಕದ್ದು ಮಾರಾಟ ದಂಧೆ ನಡೆಸುತ್ತಿದ್ದ ಹಲವಾರು ಹರಿದಾಡಿದ ಹಿನ್ನೆಲೆಯಲ್ಲಿ ಹಾವುಗಳ ಬೇಟೆ ನಡೆದಿದ್ದು, ಕದ್ದು ಮಾರಾಟ ದಂಧೆ ನಡೆಸುತ್ತಿದ್ದ ಹಲವರು ಅರಣ್ಯಾಧಿಕಾರಿಗಳಿಂದ ಬಂಧನಕ್ಕೂ ಒಳಗಾಗಿದ್ದರು. ರೈತನ ಮಿತ್ರ, ಮಣ್ಣುಮುಕ್ಕ ಹಾವು ಎಂದೆಲ್ಲ ಕರೆಯಲ್ಪಡುವ ಇವುಗಳ ಸಂತತಿ ನಾಶವಾಗುತ್ತಿರುವುದು ಬೇಸರದ ಸಂಗತಿ ಎಂದು  ಉರಗ ಪ್ರೇಮಿ ವಿನೇಶ್ ಪೂಜಾರಿ ತಿಳಿಸಿದ್ದಾರೆ‌.

Post a Comment

0 Comments