ಇರುವೈಲಿನಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಸಮಾಜ ಕಲ್ಯಾಣ ಇಲಾಖೆ, ಜಿ.ಪಂ. ಮಂಗಳೂರು, ತಾ.ಪಂ, ಮೂಡುಬಿದಿರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಸಾರ್ವಜನಿಕ ಹಿಂದೂ ರುದ್ರ ಭೂಮಿ ಸಮಿತಿ ಇರುವೈಲು ಹಾಗೂ ಗ್ರಾ.ಪಂ. ಇರುವೈಲು ಇವರ ವತಿಯಿಂದ ಇರುವೈಲಿನ ದಡ್ಡೆಗುರಿಯಲ್ಲಿ ನಿರ್ಮಿಸಿರುವ ಹಿಂದೂ ರುದ್ರ ಭೂಮಿಯನ್ನು ಕ್ಷೇತ್ರದ ಶಾಸಕ ಉಮಾನಾಥ್ ಎ.ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು ಈ ಪ್ರದೇಶದ ಜನರು ಮರಣ ಹೊಂದಿದಾಗ ಈ ಹಿಂದೂ ರುದ್ರ ಭೂಮಿಯು ಪ್ರಯೋಜನವಾಗಬೇಕು, ಮರಣ ಹೊಂದಿದ ಜನರಿಗೆ ಉತ್ತಮ ರೀತಿಯಲ್ಲಿ ಮುಕ್ತಿ ನೀಡುವ ನಿಟ್ಟಿನಲ್ಲಿ ಈ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಇಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ ಹಿಂದೂ ರುದ್ರಭೂಮಿಗಾಗಿ ಶ್ರಮಿಸಿದ ಸದಸ್ಯರನ್ನು ಅಭಿನಂದಿಸಿ, ಎಲ್ಲರೂ ಸೌಹಾರ್ದತೆಯಿಂದ ಇರುವಂತೆ ತಿಳಿಸಿದರು. 

ಇರುವೈಲು ಪಂಚಾಯತ್‌ನ ಅಧ್ಯಕ್ಷ ವಲೇರಿಯನ್ ಕುಟಿನ್ಹಾ ಅಧ್ಯಕ್ಷತೆಯನ್ನು ವಹಿಸಿದ್ದರು. 

ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಹಾಗೂ ಇರುವೈಲು ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಶಾಂತಿಪ್ರಸಾದ್‌ ಹೆಗ್ಡೆ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ರೀಟಾ ಕುಟಿನ್ಹಾ, ತಾಲೂಕು ಪಂಚಾಯತ್ ಸದಸ್ಯ ಪೃಥ್ವಿರಾಜ್‌ ಆರ್.ಕೆ . ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. 

ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜನಿಯ‌ರ್ ಮೋಹನ್ ಟಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪವನ್‌ ಕುಮಾರ್‌ ಶೆಟ್ಟಿ, ಪಂಚಾಯತ್‌ ಉಪಾಧ್ಯಕ್ಷ ಪ್ರಮೀಳಾ, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸತೀಶ್‌ ತಂಗಿಲ ಸ್ವಾಗತಿಸಿ, ಇರುವೈಲು ಹಿಂದೂ ರುದ್ರಭೂಮಿಯ ಕಾರ್ಯದರ್ಶಿ ಪ್ರಸಾದ್‌ ಶೆಟ್ಟಿ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಧನ್ಯವಾದಗೈದರು.

Post a Comment

0 Comments