ಮೂಡುಬಿದಿರೆ: ಕಾಂಗ್ರೆಸ್ ನಿಂದ ಬೈಕ್ ಜಾಥಾ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಸ್ವಾತಂತ್ರ್ಯ ಅಮೃತ ಮಹೋತ್ಸದಂಗವಾಗಿ ತ್ರಿವರ್ಣಧ್ವಜಕ್ಕೆ ಗೌರವ ನೀಡುವ ಹಿನ್ನೆಲೆಯಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ಸಂಜೆ ನಡೆಯಿತು.

ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಮೂಲ್ಕಿ ಬಪ್ಪನಾಡು‌ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವರೆಗೆ ಹೊರಟ ಜಾಥಕ್ಕೆ ಆಲಂಗಾರು ದೇವಸ್ಥಾನದ ಆಡಳಿತ ಮೋಕ್ತೇಸರ ಈಶ್ವರ ಭಟ್ ಚಾಲನೆಯನ್ನು ನೀಡಿದರು.

 ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರವೀಣ್ ಕುಮಾರ್ ಜೈನ್ ಶಿರ್ತಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಕೊರಗಪ್ಪ, ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್,  ಇಕ್ಬಾಲ್ ಕರೀಂ, ಸುರೇಶ್ ಪ್ರಭು,ಪುರಂದರ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ಚಂದ್ರಹಾಸ ಸನಿಲ್, ವಕ್ತಾರ ರಾಜೇಶ್ ಕಡಲಕೆರೆ ಶಿವಾನಂದ ಪಾಂಡ್ರು ಹಾಗೂ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.


Post a Comment

0 Comments