ಭಾರತೀಯ ಜನತಾ ಪಾರ್ಟಿ ಮಂಗಳೂರು ಜಿಲ್ಲಾ ಯುವ ಮೋರ್ಚಾ ಮುಖಂಡರಾದ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಶಿಹಾಬುದ್ದೀನ್ , ರಿಯಾಜ್ ಅಂಕತಡ್ಕ, ಬಶೀರ್ ಎಲಿಮಲೆ ಎಂದು ಗುರುತಿಸಲಾಗಿದೆ. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 10 ಮಂದಿಯನ್ನು ಬಂಧಿಸಿದ್ದು ಇವರೆಲ್ಲರೂ ಒಂದೇ ಕೋಮಿನವರಾಗಿದ್ದಾರೆ. ಈ ಮೂವರನ್ನು ತಲಪಾಡಿ ಚೆಕ್ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಸದ್ಯ ಪ್ರವೀಣ್ ಹತ್ಯೆಯ ಹಿಂದೆ ಸಾಕಷ್ಟು ಕಾರಣಗಳು ಹಾಗೂ ಕುತೂಹಲಭರಿತ ಅಂಶಗಳು ಒಳಗೊಂಡಿದ್ದು ಹಂತಕರಿಗೆ ಪಿಎಫ್‌ಐ , ಎಸ್‌ಡಿಪಿಐ ಜೊತೆ ಸಂಬಂಧವಿದೆ ಎಂಬ ಮಾಹಿತಿಯನ್ನು ಎಡಿಜಿಪಿ ಅಲೋಕ್ ಕುಮಾರ್ ನೀಡಿದ್ದಾರೆ. ಹಾಗೂ ಕೇರಳದ ಜೊತೆಗಿರುವಂತಹ ನಂಟು ಹಾಗೂ ಅಲ್ಲಿ ಇವರಿಗೆ ಸಹಕಾರ ಕೊಡುವ ಆಗಂತುಕರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.ಈ ನಡುವೆ ಮಸೂದ್ ಹತ್ಯೆಗೆ ಪ್ರತಿಕಾರವಾಗಿ ಪ್ರವೀಣ್ ಅನ್ನು ಹತ್ಯೆ ಮಾಡಿರುವುದಾಗಿಯೂ ತಿಳಿಸಿದ್ದು ಅದರ ಹಿನ್ನಲೆಯನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಬಹುತೇಕ ಎಲ್ಲಾ ಪ್ರಮುಖ ಆರೋಪಿಗಳ ಬಂಧನವಾಗಿದ್ದು ಹತ್ಯೆಯ ಹಿಂದಿರುವ ರಹಸ್ಯ ಹಾಗೂ ಅದರ ಹಿಂದಿರುವ ಸಂಘಟನೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕಷ್ಟೇ.
0 Comments