ಶ್ರೀ ಗಣೇಶ ಪೂಜಾ ಸಮಿತಿ ಪಡು ಮೂಡುಕೊಣಾಜೆ ಇದರ ವತಿಯಿಂದ ದಶಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹತ್ತು ವರ್ಷಗಳಿಂದ ಮೂಡುಬಿದಿರೆಯ ಪಡುಕೊಣಾಜೆ ಹಾಗೂ ಮೂಡುಕೊಣಾಜೆ ವ್ಯಾಪ್ತಿಯ ಗ್ರಾಮಸ್ಥರು ಸೇರಿ ಹೌದಲ್ ಪ್ರದೇಶದಲ್ಲಿ ಗಣೇಶನನ್ನು ಕೂರಿಸಿ ಚತುರ್ಥಿಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವರ್ಷ ದಶಮಹೋತ್ಸವ ಕಾರ್ಯಕ್ರಮವನ್ನು ಈ ಸಂಘಟನೆ ಆಯೋಜಿಸಿದ್ದು ಸಾರ್ವಜನಿಕರಿಗೆ ವಿಶೇಷ ಕರೆಯೋಲೆಯನ್ನು ನೀಡಲಾಗಿದೆ
0 Comments