ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ಮೂಲ್ಕಿಯಿಂದ ಮೂಡುಬಿದಿರೆಯ ವರೆಗೆ ಕಾಲ್ನಡಿಗೆ ಮೂಲಕ ತ್ರಿವರ್ಣ ಧ್ವಜವನ್ನು ಹೊತ್ತು ಸಾಗುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ
27 ಕಿಲೋಮೀಟರ್ ದೂರ ನಡೆಯಲಿರುವ ಈ ತಿರಂಗ ಯಾತ್ರೆಗಾಗಿ ಅಭಿಯಾನ ಸಮಿತಿ ರಚಿಸಲಾಗಿದೆ. ಮೂಲ್ಕಿಯಿಂದ ಮೂಡುಬಿದಿರೆ ತನಕ 100 ಮೀಟರ್ ಉದ್ದದ ಧ್ವಜವನ್ನು ಹಿಡಿದುಕೊಂಡು ನಡೆಯಲಿರುವ ತಿರಂಗ ಯಾತ್ರೆ ಹೆಸರಿನೊಂದಿಗೆ ಮೂಲ್ಕಿಯಿಂದ ಮೂಡುಬಿದಿರೆಯ ವರೆಗೆ ಸಾಗಲಿದೆ.ಅಂದು 8:00 ಗಂಟೆಗೆ ಸ್ವಾತಂತ್ರ ಹೋರಾಟಗಾರ ಕಾರ್ನಾಡು ಸದಾಶಿವ ರಾವ್ ಅವರ ಹುಟ್ಟೂರು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು ರಾಣಿ ಅಬ್ಬಕ್ಕನ ಹುಟ್ಟೂರು ಮೂಡಬಿದಿರೆವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ 26 ಗ್ರಾಮ ಪಂಚಾಯತ್, 1 ನಗರ ಪಂಚಾಯತ್, 2 ಪಟ್ಟಣ ಪಂಚಾಯತ್, ಒಂದು ಪುರಸಭೆಯ ವ್ಯಾಪ್ತಿಯ ನೂರು ಮಂದಿಯಂತೆ ಧ್ವಜ ಹಿಡಿಯಲು ಹಾಗೂ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಭಾಗವಹಿಸುವಂತೆ ಪ್ರೇರೇಪಿಸಲಾಗಿದೆ.
ಈ ಮೆರವಣಿಗೆಯಲ್ಲಿ ಮುಂಭಾಗ ಭಾರತ ಮಾತೆಯ ಭಾವಚಿತ್ರ, ದೇಶಭಕ್ತ ಕಾರ್ನಾಡು ಸದಾಶಿವರಾಯರ ಭಾವಚಿತ್ರ, ವೀರರಾಣಿ ಅಬ್ಬಕ್ಕ ಅವರ ಭಾವಚಿತ್ರ ಇರಲಿದೆ. ದೇಶಭಕ್ತಿ ಗೀತೆಗಳ ಗಾಯನ ವಿವಿಧ ಭಜನಾ ತಂಡಗಳು ಟ್ಯಾಬ್ಲೋ, ಚೆಂಡೆ ಮತ್ತಿತರ ತಂಡಗಳು ಯಾತ್ರೆಗೆ ಮೆರಗು ನೀಡಲಿದೆ.
ಈ ವಿಶೇಷ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲು, ಮೂಲ್ಕಿ - ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ಸಹಿತ ಇನ್ನಿತರ ಗಣ್ಯರು ಚಾಲನೆ ನೀಡಲಿದ್ದಾರೆ.
0 Comments