ಕೆರೆಯ ಸುತ್ತ 75 ಧ್ವಜಗಳನ್ನು ಜೋಡಿಸಿ ಸ್ವಾತಂತ್ರ್ಯೋತ್ಸವ ಹಬ್ಬ ಆಚರಣೆ: ಅಮೃತ ಸರೋವರ ಯೋಜನೆ


 ಆಜಾದಿ ಕಾ ಅಮೃತ ಮಹೋತ್ಸವದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮಗ್ರ ಕೆರೆಗಳ ಅಭಿವೃದ್ದಿಗಾಗಿ "ಅಮೃತ ಸರೋವರ" ಯೋಜನೆಯಡಿಯಲ್ಲಿ ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂದ್ರಟ್ಟ ಕೆರೆಯ ದಡದಲ್ಲಿ ಮಾಜಿ ಸೈನಿಕರಾದ ನವನಂದ್ ಅವರು ಧ್ವಜಾರೋಹಣ ನೆರವೇರಿಸಿದರು.


ಈ ಸಂದರ್ಭದಲ್ಲಿ ಕೆರೆಯ ಸುತ್ತಲೂ 75 ಬಾವುಟಗಳನ್ನು ಜೋಡಿಸಿ ಹಾರಿಸಿರುವುದು ವಿಶೇಷವಾಗಿತ್ತು

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಮಾಜಿ ಸೈನಿಕರ ವೇದಿಕೆ ಕಾರ್ಯದರ್ಶಿಯವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0 Comments

Advertisement