ಮೂಡುಬಿದಿರೆ : "ಭಾರತದ 75ನೇ ಸ್ವಾತಂತ್ರ್ಯ ಅದ್ಭುತ ಮಹೋತ್ಸವ'ದ ಕುರಿತಾಗಿ 'ಮನೆ ಮನೆಯಲ್ಲಿ ತ್ರಿವರ್ಣ ಧ್ವಜ' ಹಾಗೂ 'ಅಮೃತ ಭಾರತಿಗೆ ಕನ್ನಡದಾರತಿ ಅಟಿಯಾನದ ಅಂಗವಾಗಿ ಮೂಡುಬಿದಿರೆ ಪುರಸಭೆಯ ವತಿಯಿಂದ ಎಕ್ಸಲೆಂಟ್ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳು ನಡೆದವು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಸಸಿಗೆ ನೀರೆರೆಯುವ ಮೂಲಕ ಸ್ಪರ್ಧೆಗಳಿಗೆ
ಚಾಲನೆಯನ್ನು ನೀಡಿ ವಿದ್ಯೆಯಿಂದ ಅಮೃತವನ್ನು ಪಡೆಯುತ್ತಾರೆ. ಉತ್ತಮವಾದ ವಿದ್ಯೆಯ ನ್ನು ಪಡೆದು ಅದರಿಂದ ಪಡೆದ ಸುಜ್ಞಾನವನ್ನು ದೇಶ ಸೇವೆ ಮಾಡಲು ಬಳಸಿಕೊಳ್ಳಬೇಕು. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ೯ರದ ಆಶಯದಂತೆ ಪ್ರತಿ ಮನೆಗಳಲ್ಲಿಯ ತ್ರಿವರ್ಣ ಧ್ವಜವನ್ನು ಹಾರಿಸಿ ಹಬ್ಬವನ್ನು ಆಚರಿಸಬೇಕು, ಮನೆ ಮನೆಯಲ್ಲಿ ತ್ರಿವರ್ಣ ಧ್ವಜಕಾರ್ಯಕ್ರಮ ಕೇವಲ ಸಾಲಕ ಅರಿವಾಗದೆ ಅರ್ಥಪೂರ್ಣವಾಗಬೇಕು. ನಮ್ಮ ದೇಶದ ಸ್ವಾತ್ರಂತ್ಯಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಸ್ವಾತಂತ್ರ ವೀರರ ಜೀವನ ಚರಿತ್ರತಮ್ಮೆಲ್ಲರಿಗೂ ಸ್ಪೂರ್ತಿ ನೀಡಲಿ ಎಂದೆ ಅವರು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು.
ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೂಡುಬಿದಿರೆ, ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ, ಪರಿಸರ ಅಭಿಯಂತರೆ ಶಿಲ್ಪಾ ಎಸ್ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ ನಾಯಕ್ ಸ್ವಾಗತಿಸಿದರು. ಡಾ. ವಾದಿರಾಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments