ಶ್ರೀ ಮಹಾವೀರ ಕಾಲೇಜು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಇವುಗಳ ಸಹಭಾಗಿತ್ವದಲ್ಲಿ ಮಹಾವೀರ ಕಾಲೇಜಿ ನಲ್ಲಿ ಮಂಗಳವಾರ ನಡೆದ ತುಳುನಾಡ ಸಿರಿ-೨೦೨೨: ತುಳು ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಮತ್ತು ತುಳು ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಇಂದು ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರು ವಿ.ವಿ. ನಿವೃತ್ತ ಉಪಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ, ಅವರ ೨೮ನೇ ಕೃತಿ ತುಳು ಬದುಕು" ಪುಸ್ತಕವನ್ನು ಮಾಜಿ ಸಚಿವ ಹಾಗೂ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಮೂಡುಬಿದಿರೆಯ ವೀರಪ್ಪ ಮೊಯಿಲಿ ನಮಗೆ ತುಳು ಅಕಾಡೆಮಿ ಕೊಟ್ಟರು. ತುಳುವರೇ ಸಂಸದರಾಗಿ, ಮೂರು ಬಾರಿ ಆಯ್ಕೆಯಾಗಿದ್ದರೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೂ ಇನ್ನೂ ಈ ಪರಿಚ್ಛೇದಕ್ಕೆ ಸೇರಿಸಲಾಗಿಲ್ಲ. ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಲು ಇವರೆಲ್ಲರೂ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.
ಡಾ. ಪ್ರಭಾಕರ ನೀರುಮಾರ್ಗ ಅವರನ್ನು ಸನ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿ, ದ.ಕ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಕೃತಿಕಾರ ಡಾ. ಪ್ರಭಾಕರ ನೀರುಮಾರ್ಗ, ಆಳ್ವಾಸ್ ನ ಅಧ್ಯಾಪಕ ಡಾ. ಯೋಗೀಶ್ "ಕೈರೋಡಿ ಕೃತಿಯ ವಿಶೇಷ ಕುರಿತು ಮಾತನಾಡಿದರು.
ವಿಚಾರ ಸಂಕಿರಣ: ಚಿತ್ರ, ನಿರ್ಮಾಪಕ ತಮ್ಮಣ ಶೆಟ್ಟಿ ಅವರು ತುಳು ಸಂಸ್ಕೃತಿಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿ, 'ದೈವಾರಾಧನೆ' ಕುರಿತು ಮಾತನಾಡಿದರು.
''ತುಳುನಾಡಿನ, ಆಹಾರ ಪದ್ಧತಿಯ ಬಗ್ಗೆ ಹಳೆ ವಿದ್ಯಾರ್ಥಿ, ಪತ್ರಕರ್ತ ಧನಂಜಯ ಮೂಡುಬಿದಿರೆ ವಿಚಾರ ಪ್ರಸ್ತುತಪಡಿಸಿದರು.
ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ., ಪದವಿ ಕಾಲೇಗಿನ ಪ್ರಾಂಶುಪಾಲ ರಾಧಾಕೃಷ್ಣ, ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ , ತುಳು ಸಂಘದ ಕಾರ್ಯದರ್ಶಿ ದೇವಿ ಪ್ರಸಾದ್, ವಿದಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಿಶನ್, ವಿದ್ಯಾರ್ಥಿ ಸಂಯೋಜಕರಾದ ಗುರುಪ್ರಸಾದ್, ರಕ್ಷಿತ್, ಪ್ರಶಾಂತ್, ವಿಕಾಸ್ ಮತ್ತು ಮೇಘ ಉಪಸ್ಥಿತರಿದ್ದರು.
ಕಾಲೇಜಿನ ಗ್ರಂಥಾಲಯದಲ್ಲಿ ತುಳು ಪುಸ್ತಕಗಳ ಪ್ರದರ್ಶನ, ವಿಠಲ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ 'ತುಳು ಗೀತಾ ಸಾಹಿತ್ಯ ಸಂಭ್ರಮ ಏರ್ಪಡಿಸಲಾಗಿತ್ತು.
ಕಾಲೇಜಿನ ತುಳು ಸಂಘದ ಸಂಯೋಜಕಿ, ಮುಖ್ಯ ಗ್ರಂಥ ಪಾಲಕಿ ನಳಿನಿ ಸ್ವಾಗತಿಸಿ, ಅಪೂರ್ವ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ. ಹರೀಶ್ ವಂದಿಸಿದರು.
0 Comments