ಬಿಆರ್‌ಪಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕನಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿರುವ ಕೇಶವ ಪ್ರಕಾಶ್ ಅವರನ್ನು ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

   ಆಡಳಿತ ಮಂಡಳಿಯ ಗೌರವಾಧ್ಯಕ್ಷ ಅಭಯಚಂದ್ರ ಜೈನ್ ಅವರು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹೆದರುವುದು ದೈಹಿಕ ಶಿಕ್ಷಣ ಶಿಕ್ಷಕರಿಗೆ ಮಾತ್ರ. ವಿದ್ಯಾರ್ಥಿಗಳನ್ನು ಕ್ರೀಡಾ ಸ್ಪೂರ್ತಿಯೊಂದಿಗೆ ಶಿಸ್ತಿನಿಂದ ಬೆಳೆಸುವವರು ಅವರು. ಮಕ್ಕಳ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಶಿಕ್ಷಕ ಕೇಶವ ಪ್ರಕಾಶ್ ಅವರು ಓರ್ವ ಆದರ್ಶ  ಶಿಕ್ಷಕನಾಗಿ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ ಎಂದರು. 

 ಶಿಕ್ಷಕ ಕೇಶವ ಪ್ರಕಾಶ್ ಶಾಲೆಗೆ ೪೦ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ನಂತರ  ಮಾತನಾಡಿದ  ಅವರು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗೂ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕ್ರೀಡಾ ಕೋಟದಲ್ಲಿ ಉದ್ಯೋಗದ ಅವಕಾಶಗಳಿವೆ ಎಂದು ಹೇಳಿದರು.  

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗರಾಜ್, ಹಳೆ ವಿದ್ಯಾರ್ಥಿನಿ ಪ್ರೇಮಶ್ರೀ ಹಾಗೂ ವಿದ್ಯಾರ್ಥಿಗಳಾದ ವಿಕ್ರೀತ, ರೀಷಾ ಅವರು ತಮ್ಮ ಶಿಕ್ಷಕ ಕೇಶವ ಪ್ರಕಾಶ್ ಅವರ ಬಗ್ಗೆ ಅನಿಸಿಕೆಯನ್ನು ಹಂಚಿಕೊಂಡರು.  

ಆಡಳಿತ ಮಂಡಳಿಯ ಅಧ್ಯಕ್ಷ ರಮನಾಥ್ ಭಟ್, ಸಂಚಾಲಕ ವಿಶ್ವನಾಥ ಪ್ರಭು ದಂಪತಿ, ಆಡಳಿತ ಮಂಡಳಿಯ ಸದಸ್ಯರಾದ ಸಂಪತ್ ಸಾಮ್ರಾಜ್ಯ, ಜಯಪ್ರಕಾಶ್ ಪಡಿವಾಳ್, ಪುಷ್ಪರಾಜ್, ರಾಮ್ ಪ್ರಸಾದ್ ಭಟ್, ನಿವೃತ್ತ ಶಿಕ್ಷಕ ಬಾಹುಬಲಿ, ಹಾಗೂ ಶಿಕ್ಷಕರು ಮತ್ತು ಸಿಬಂಧಿಗಳು ಉಪಸ್ಥಿತರಿದ್ದರು. 

  ಮುಖ್ಯ ಶಿಕ್ಷಕಿ ಪದ್ಮಜಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಜನಾರ್ದನ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಅನ್ನು ವಂದಿಸಿದರು. 

 

   

Post a Comment

0 Comments