ಮೂಡುಬಿದಿರೆ: ಹಿಂದೂ ಸಮಾಜ ಷಂಡ, ನಪುಂಸಕ ಸಮಾಜವಾಗಿ ಹೇಡಿತನದಿಂದ ಉಳಿದರೆ ಮುಂದೊಂದು ದಿನ ಕನ್ನಯ್ಯನ ಪರಿಸ್ಥಿತಿ ನಮಗೂ ಎದುರಾಗಬಹುದು. ಹಿಂದೂ ಸಮಾಜ ಹೇಡಿ ಸಮಾಜವಲ್ಲ ಈ ನಾಡಿನ ಒಬ್ಬೊಬ್ಬ ಹಿಂದೂವಿನಲ್ಲೂ ಅನ್ಯಾಯ, ಆಕ್ರಮಣ, ಅತ್ಯಾಚಾರವನ್ನು ಎದುರಿಸುವ ತಾಕತ್ತು ಇದೆ. ಹಿಂದೂ ಸಮಾಜ ಈ ನಾಡಿಗೆ ನೀರು ಕೇಳಿಕೊಂಡು ಬಂದವರಿಗೆಲ್ಲ ಹಾಲು ಕೊಟ್ಟೆವು, ಆದರೆ ಹಾಲು ಕುಡಿದವರು ಇಂದು ವಿಷ ಕಕ್ಕುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಮುಖಂಡ ರಾಧಾಕೃಷ್ಣ ಅಡ್ಯಾಂತಾಯ ಆಕ್ರೋಶ ವ್ಯಕ್ತಪಡಿಸಿದರು.
ಅವರು ರಾಜಸ್ತಾನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಟೈಲರ್ ಕನ್ನಯ್ಯ ಲಾಲ್‍ನ್ನು ಐಸಿಸ್ ರೀತಿಯಲ್ಲಿ ಕೊಂದು ಶಿರಚ್ಛೇದ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟ ಮತಾಂಧ ಕಿರಾತಕರ ಹತ್ಯೆಯನ್ನು ಖಂಡಿಸಿ ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆಯಿಂದ ನಡೆದ ಪಂಜಿನ ಮೆರವಣಿಗೆ ಹಾಗೂ ಖಂಡನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ದೇಶದ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ದೇಶಕ್ಕೆ ದ್ರೋಹ , ಉಂಡ ಮನೆಗೆ ಗುಂಡು ಹೊಡೆಯುತ್ತಿರೇ? ನಿಮ್ಮದೇ ಹೆಣ್ಣು ಮಕ್ಕಳಿಗೆ ನೀವು ಸ್ವಾತಂತ್ರ್ಯವನ್ನು ನೀಡಿಲ್ಲ, ಮತ್ತೇ ಹಿಂದೂ ಹೆಣ್ಣು ಮಕ್ಕಳಿಗೆ ಎಷ್ಟು ಗೌರವವನ್ನು ನೀಡುತ್ತೀರಿ? ಮತಾಂಧ ಜಿಹಾದಿಗಳೇ ನಿಮಗೆ ಪ್ರತ್ಯೇಕ ನರಕ ಸೃಷ್ಟಿ ಮಾಡಬೇಕಾದಿತು ಅಂತಹ ಮಹಾಪಾಪಿಗಳು ನೀವು. ನಿಮ್ಮನ್ನು ಧ್ವಂಸ ಮಾಡಲು ಹಿಂದೂ ಸಮಾಜವು ಒಮ್ಮೆ ಯೋಚಿಸಿದರೆ ಸಾಕು, ಆದರೆ ಹಿಂದೂ ಸಮಾಜದಲ್ಲಿ ವಿವೇಕ, ತಾಳ್ಮೆ ಸಂಯಮವಿದೆ ಹಿಂದೂ ಸಮಾಜದ ತಾಳ್ಮೆಯನ್ನು ಕೆಣಕಬೇಡಿ ಎಂದು ಎಚ್ಚರಿಸಿದರು.
33 ಕೋಟಿ ದೇವರುಗಳನ್ನು ಆರಾಧಿಸಿಕೊಂಡು ಬಂದಿರುವ ಹಿಂದೂ ಸಮಾಜ ಒಬ್ಬ ಅಲ್ಲಾನನ್ನು, ಯೇಸುವನ್ನು ತಿರಸ್ಕರಿಸುವುದಿಲ್ಲ. ಅಲ್ಲಾಯ್ಯ ನಮಃ, ಯೇಸುವಯಾ ನಮಃ ಎಂದು ಹೇಳಲು ಹಿಂದೂ ಸಮಾಜಕ್ಕೆ ಅಸಹ್ಯವಾಗುವುದಿಲ್ಲ. ಜಗತ್ತಿನಲ್ಲಿರುವ ಎಲ್ಲಾ ಮಹಾತ್ಮರಿಗೆ ಗೌರವವನ್ನು ಕೊಟ್ಟಿರುವ ಸಮಾಜ ಹಿಂದೂ ಸಮಾಜವಾಗಿದೆ ಎಂದರು.
ಕಿಡಿಗೇಡಿಗಳು 15 ನಿಮಿಷ ಪೊಲೀಸರು ಸುಮ್ಮನಿರಿ 25% ಇರುವ ಮುಸಲ್ಮಾನರು 100% ಇರುವ ಹಿಂದೂಗಳನ್ನು ಕೊಚ್ಚಿ ಹಾಕುತ್ತೇವೆ ಎಂದು ಹೇಳುವ ಮತಾಂಧರಿಗೆ, ಅದೇ 15 ನಿಮಿಷ ಸಮಯದಲ್ಲಿ ಪೊಲೀಸರು ಸುಮ್ಮನಿದ್ದರೆ ಈ ಹಿಂದೂ ಸಮಾಜವು ಆ ಪಾತಾಕಿಗಳನ್ನು ಸುಟ್ಟು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ಕೆಎಂಎಫ್ ನ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮಹೇಶ್ ಬಿಜೆಪಿ ಮುಖಂಡರಾದ ಕೆ.ಪಿ ಜಗದೀಶ್ ಅಧಿಕಾರಿ, ಲಕ್ಷ್ಮಣ್ ಪೂಜಾರಿ, ಗೋಪಾಲ್ ಶೆಟ್ಟಿಗಾರ್ ಹಿ.ಜಾಗರಣ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಕೆಲ್ಲಪುತ್ತಿಗೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೋಟ್ಯಾನ್ ಸಹಿತ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿ 500 ಕ್ಕೂ ಅಧಿಕ ಮಂದಿ ಪಂಜಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಮೂಡುಬಿದಿರೆಯ ಸಾವಿರ ಕಂಬದ ಬಸದಿಯಿಂದ ಸಮಾಜಮಂದಿರದವರೆಗೆ ನಡೆದ ಪಂಜಿನ ಮೆರವಣಿಗೆಗೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಚಾಲನೆಯನ್ನು ನೀಡಿದರು.
ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಸಮಿತ್‍ರಾಜ್ ದರೆಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
0 Comments