ಪ್ರಧಾನಿಯಾಗುವ ಮೊದಲೇ ಚೀನಾ ವಿರುದ್ಧ ಅಬ್ಬರಿಸಿದ ಭಾರತ ಮೂಲಕ ಬ್ರಿಟನ್ ಯುವ‌ನಾಯಕ:ಪ್ರಧಾನಿ ಆಯ್ಕೆ ಪ್ರಕ್ರಿಯೆಯಲ್ಲಿದೆ

ಜಾಹೀರಾತು/Advertisment
ಜಾಹೀರಾತು/Advertisment

'ಚೀನಾದ ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನಿ ಪ್ರಭಾವ ಹೆಚ್ಚಾಗದಂತೆ ತಡೆಯಲು ಬ್ರಿಟನ್​ನಲ್ಲಿರುವ ಎಲ್ಲ 30 ಕನ್ಫ್ಯೂಷಿಯಸ್ ​ಸಂಸ್ಥೆಗಳನ್ನು ಮುಚ್ಚುವೆ. ಚೀನಿ ಕಮ್ಯುನಿಷ್ಟ್​ ಪಕ್ಷವನ್ನ ನಮ್ಮ ವಿಶ್ವವಿದ್ಯಾಲಯದಗಳಿಂದ ಹೊರಹಾಕಲಾಗವುದು. ಚೀನಿ ಬೇಹುಗಾರಿಕೆ ಎದುರಿಸಲು ಬ್ರಿಟನ್​ ದೇಶೀಯ ಬೇಹುಗಾರಿಕೆ ಸಂಸ್ಥೆ ಎಂಐ5 ಅನ್ನು ಬಳಸಲಾಗವುದು. ಬ್ರಿಟೀಷ್​ ಸ್ವತ್ತುಗಳನ್ನು ಚೀನಿಯರ ಸ್ವಾಧೀನಕ್ಕೆ ಹೋಗದಂತೆ ಎಚ್ಚರ ವಹಿಸಲಾಗುವುದು' ಎಂದು ರಿಷಿ ಸುನಕ್​ ಅವರು ಮಹತ್ವದ ಶಪಥ ಮಾಡಿದ್ದಾರೆ.

ಪ್ರಧಾನಿ ಬೋರಿಸ್​ ಜಾನ್ಸನ್​​ರ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಧಾನಿ ರೇಸ್​ನಲ್ಲಿ ಬ್ರಿಟನ್​ನ ಮಾಜಿ ಹಣಕಾಸು ಸಚಿವರೂ ಆದ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್.ಆರ್​. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಮುಂಚೂಣಿಯಲ್ಲಿದ್ದಾರೆ. ಅಂತಿಮ ಸುತ್ತಿಗೆ ಇಬ್ಬರು ಸ್ಪರ್ಧಿಗಳು ತೆರಳಿದ್ದು, ಸದ್ಯದ ಮಾಹಿತಿ ಪ್ರಕಾರ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.

Post a Comment

0 Comments