ಆಧಾರ್ ನೋಂದಣಿ , ತಿದ್ದುಪಡಿ ಮೇಳ ಹಾಗೂ ಅಂಚೆ ಕಛೇರಿಯ ವಿವಿಧ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ    ಗ್ರಾಮ ಪಂಚಾಯತ್ ಕಾಂತಾವರ ಇವರ ಸಹಯೋಗದೊಂದಿಗೆ

ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮೇಳ ಮತ್ತು ಅಂಚೆ ಕಛೇರಿಯ ವಿವಿಧ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಗುರುವಾರ

ಕಾಂತಾವರ ಕನ್ನಡ ಸಂಘದಲ್ಲಿ    ನಡೆಯಿತು.

ಕಾರ್ಯಕ್ರಮವನ್ನು  ಕಾಂತಾವರ  ಗ್ರಾಮ ಪಂಚಾಯತ್  ಅಧ್ಯಕ್ಷರು ಉದ್ಘಾಟಿಸಿ,ಮಾತನಾಡಿ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ಸರ್ಕಾರದ ಇನ್ನಷ್ಟು ಹೆಚ್ಚಿನ ಸೇವಾ ಸೌಲಭ್ಯಗಳನ್ನು  ಜನರಿಗೆ ತಲುಪುವಂತೆ ಮಾಡುತ್ತೇವೆ ಎಂಬ ಭರವಸೆಯೊಂದಿಗೆ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಈ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಅಧಿಕ ಸಾರ್ವಜನಿಕರು ತಮ್ಮ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ಮಾಡಿಕೊಳ್ಳುವುದರ ಮೂಲಕ ಈ ಕಾರ್ಯಕ್ರಮದ ಪ್ರಯೋಜನ ಪಡೆದರು. 

 ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಡಾ. ಏಂಜಲ್ ರಾಜ್ , ಸಹಾಯಕ ಅಂಚೆ ಅಧೀಕ್ಷಕ  ಜೋಸೆಫ್ ರೊಡ್ರಿಗಸ್,  ಚಂದ್ರಾ ನಾಯ್ಕ್, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನ ಮ್ಯಾನೇಜರ್  ಶಿಹಾಸ್, ಅಂಚೆ ಸಹಾಯಕರಾದ  ಜನಾರ್ಧನ್,  ಗುರುಪ್ರಸಾದ್ ಕೆ. ಎಸ್, ಹಾಗೂ ಆಧಾರ್ ಆಪರೇಟರ್ ಗಳಾದ ವಿಘ್ನೇಶ್ ನಾಯಕ್, ಕುಮಾರಿ ಸುಪ್ರೀತ ಉಪಸ್ಥಿತರಿದ್ದರು.

Post a Comment

0 Comments