ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಬಸ್ ಗಳಲ್ಲಿ ಶೇ.50, ನಿತ್ಯ ಪ್ರಯಾಣಿಕರಿಗೆ ಶೇ.20 ರಿಯಾಯಿತಿ ವ್ಯವಸ್ಥೆ ಕಲ್ಪಿಸಲಾಗಿದೆ. ನ ಕೊಡುಗೆ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ, ಲಾಭ-ನಷ್ಟಗಳನ್ನು ನೋಡದೆ ಈ ಸೌಲಭ್ಯವನ್ನು ಚಲೋ ಬಸ್ ಕಾರ್ಡ್‌ನ ಮುಖಾಂತರ ನೀಡುತ್ತಿದ್ದು, ಇದು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈಗಾಗಲೇ 25ಕ್ಕೂ ಅಧಿಕ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಎಂದು ಕೆನರಾ ಬಸ್ ಮಾಲೀಕರ ಸಂಘದ ಮೂಡುಬಿದಿರೆ ವಲಯ ಅಧ್ಯಕ್ಷ ನಾರಾಯಣ ಪಿ.ಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಲೋ ಕಾರ್ಡ್ ಸಂಸ್ಥೆ ಮೂಡುಬಿದಿರೆ ಪ್ರಬಂಧಕ ಶಿವರಾಜ್ ಮಾಹಿತಿ ನೀಡಿ, ವಿದ್ಯಾರ್ಥಿಗಳು ಶಾಲೆ, ಕಾಲೇಜಿನ ಗುರುತಿನ ಚೀಟಿ ಅಥವಾ ಶುಲ್ಕ ಪಾವತಿಸಿದ ಇತ್ತೀಚಿನ ರಶೀದಿಯೊಂದಿಗೆ ಚಲೋ ಕಾರ್ಡ್ ಕೇಂದ್ರಗಳಲ್ಲಿ ಬಸ್ ಪಾಸ್ ಮಾಡಿಸಿಕೊಳ್ಳಬಹುದು. ಮೂಡುಬಿದಿರೆ ತಾಲೂಕಿನ ಏಳು ಕಡೆ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಚಲೋ ಕೇಂದ್ರಗಳಿದ್ದು, ನೋಂದಣಿ ಮಾಡಿಕೊಳ್ಳಬಹುದು. ಬಸ್ ಪಾಸ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಗಳಿಗಾಗಿ ಚಲೋ ಸಹಾಯವಾಣಿ 9141134640ಗೆ ಸೋಮವಾರದಿಂದ ಶನಿವಾರದವರೆಗೆ ಸಂಪರ್ಕಿಸಬಹುದು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸಪಲಿಗ ಸುದ್ದಿಗೋಷ್ಠಿಯಲ್ಲಿದ್ದರು.
0 Comments