ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 


ಕಾರ್ಕಳ: ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಎಷ್ಟೇ ದೊಡ್ಡ ಹುದ್ದೆಯನ್ನು ಪಡೆದುಕೊಂಡರೂ, ವಿದ್ಯೆ ಕಲಿಸಿದ ಗುರು ಹಾಗೂ ಹೆತ್ತವರನ್ನು ಎಂದಿಗೂ ಮರೆ

ಯಬಾರದು. ನೀವು ಚೆನ್ನಾಗಿ ಓದಿ ದೊಡ್ಡವರಾದ ಮೇಲೆ ಉತ್ತಮ ಹುದ್ದೆಗಳನ್ನು ಪಡೆದುಕೊಂಡು, ಇದೇ ರೀತಿ ಶಾಲೆಗಳಿಗೆ, ಸಮಾಜಕ್ಕೆ ನಿಮ್ಮಿಂದಾಗುವಷ್ಟು ಸಹಾಯವನ್ನು ನೀಡಿ ಅವರ ನಗುವಿಗೆ ಕಾರಣರಾಗಿ ಎಂದು ಮೇಕ್ ಸಂಓನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್‌ ತಂಡದ ಸದಸ್ಯ ವಲೇರಿಯನ್ನು ಲೋಬೋ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಇಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರಿನಲ್ಲಿ ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ವತಿಯಿಂದ ನಡೆದ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್‌ ವಿತರಣೆ ಕಾರಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಪುಸ್ತಕವನ್ನು ವಿತರಿಸಿ ಮಾತನಾಡಿದರು.


ಕಾರ ಕ್ರಮದ ಅಧ್ಯಕ್ಷತೆಯನ್ನು ಎಸ್‌.ಡಿ.ಎಂ.ಸಿ ಯ ಅಧ್ಯಕ್ಷೆ ಜಯಶ್ರೀ ದೇವಾಡಿಗ ವಹಿಸಿದ್ದರು.


 ಈ ಸಂದರ್ಭದಲ್ಲಿ ತಂಡದ ಸದಸ್ಯರುಗಳಾದ ಗುರುಪ್ರಸಾದ್, ಹಾಗೂ ಪ್ರದೀಪ್‌ ವಿದ್ಯಾರ್ಥಿಗಳೊಂದಿಗೆ ಬೆರೆತು, ಚಟುವಟಿಕೆಯನ್ನು ನಡೆಸಿ, ಮುಂದಿನ ದಿನಗಳಲ್ಲಿ, ನೀವು ಇದೇ ರೀತಿ ಸಮಾಜಕ್ಕೆ ಸಹಾಯವಾಗುವಂತಹ ಕೆಲಸಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 

ಸಾಣೂರು ಗ್ರಾ.ಪಂ ಸದಸ್ಯರುಗಳಾದ ಸರಸ್ವತಿ, ಸುನಂದ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಎಸ್‌.ಕೆ.ಎಫ್ ನ ಮುಖ್ಯಾಧಿಕಾರಿ ಗ್ಯಾನ್‌ ರಂಜನ್‌ ಮಲಿಕ್, ಎಸ್.ಡಿ.ಎಂ.ಸಿಯ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಬುಶ್ರಾ, ಶಾಲಾ ವಿದ್ಯಾರ್ಥಿ ನಾಯಕಿ ಲಹರಿ ಹಾಗೂ ಮೇಕ್ ಸಂಒನ್‌ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ಸದಸ್ಯರು,  ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಪೋಷಕರು, ಉಪಸ್ಥಿತರಿದ್ದರು.

 ಕಾರ್ಯಕ್ರಮವನ್ನು ಶಿಕ್ಷಕಿ ಕಲಾವತಿ ನಿರೂಪಿಸಿ, ಮುಖ್ಯೋಪಾಧ್ಯಾಯಿನಿ ಉಷಾ ತಾಮನ್ಕ‌ರ್ ಸ್ವಾಗತಿಸಿ, ಶಿಕ್ಷಕಿ ನಿರ್ಮಲಾ ಬಿ.ಡಿ.ಮೆಲ್ಲೊ ಧನ್ಯವಾದಗೈದರು.

Post a Comment

0 Comments