ಮೂಡುಬಿದಿರೆಯಲ್ಲಿ ಕೃಷಿ ಮಾಹಿತಿ ರಥಕ್ಕೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮೂಡುಬಿದಿರೆ ಕೃಷಿ ಇಲಾಖೆಯಲ್ಲಿ ಕೃಷಿ ಮಾಹಿತಿ ರಥವನ್ನು ಶಾಸಕ ಉಮಾನಾಥ್ ಕೋಟ್ಯಾನ್‌ ಸಮಗ್ರ ಕೃಷಿ ಅಭಿಯಾನ ಮಾಹಿತಿಯನ್ನೊಳಗೊಂಡ ಕರವಸ್ತ್ರವನ್ನು ಬಿಡುಗಡೆಗೊಳಿಸಿ, ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಕೃಷಿ ಅಭಿಯಾನ ೨೦.೨೪-೫ ಗೆ ಚಾಲನೆಯನ್ನು ನೀಡಿದರು.

ನಂತರ ಮಾತನಾಡಿದ ಕೋಟ್ಯಾನ್, ಕೃಷಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸಿಗುವಂತಹ ಸವಲತ್ತು, ಯೋಜನೆಗಳ ಕುರಿತು ರೈತಾಪಿ ವರ್ಗಕ್ಕೆ ಮಾಹಿತಿ ನೀಡುವಂತಹ ಕಾರ್ಯವನ್ನು ಕೃಷಿ ಮಾಹಿತಿ ರಥ ಕೊಡಲಿದೆ ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಅನೇಕ ಯೋಜನೆಗಳನ್ನು ತಂದಿದ ಆದರೆ ಗ್ರಾಮೀಣ ಭಾಗದ ರೈತರಿಗೆ ಇದರ ಮಾಹಿತಿ ಇಲ್ಲದಿರುವ ಕಾರಣದಿಂದ ಪ್ರತಿಯೊಬ್ಬ ರೈತರಿಗೂ ಇದರ ಮಾಹಿತಿಯನ್ನು ತಲುಪುವಂತಾಗಬೇಕೆಂದರು.


 ಪ್ರತಿಯೊಬ್ಬ ರೈತನು ಫಲಾನುಭವಿಯಾಗಬೇಕೆಂಬ ನಿಟ್ಟಿನಲ್ಲಿ ಸರಕಾರವು ರೈತರಿಗೆ ಸರಕಾರದಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಕೃಷಿ ಮಾಹಿತಿ ರಥವನ್ನು ಪ್ರತೀ ಗ್ರಾಮ ಗ್ರಾಮಗಳಿಗೆ ಕಳುಹಿಸಿ ರೈತರಿಗೆ ಸರಕಾರದಿಂದ ಪಡೆಯುವ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಲಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಪಡೆಯಿರಿ ಎಂದು ಸಲಹೆ ನೀಡಿದರು. 

ಈ ಸಂದರ್ಭ ಕೃಷಿ ಇಲಾಖೆಯಿಂದ ಅರ್ಜಿದಾರ ಅರ್ಹ ರೈತ ಫಲಾನುಭವಿಗಳಿಗೆ ಪೈಪ್‌ ಹಾಗೂ ಇನ್ನಿತರ ಕೃಷಿ ಬಳಕೆಯ ಸಾಮಗ್ರಿಯನ್ನು ವಿತರಿಸಲಾಯಿತು.

ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಕೃಷಿಕರಾದ ನಾಗರಾಜ್‌ ಶೆಟ್ಟಿ ಅಂಬೂರಿ, ಹರ್ಷವರ್ಮ ಬೆಳುವಾಯಿ, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಮತ್ತಿತರ ಗಣ್ಯರು, ಹಾಗೂ ರೈತರು ಉಪಸ್ಥಿತರಿದ್ದರು.

ಮೂಡುಬಿದಿರೆ ಕೃಷಿ ಅಧಿಕಾರಿ ವಿ. ಎಸ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.

Post a Comment

0 Comments