ಇರುವೈಲು ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಸ. ಹಿ. ಪ್ರಾ ಶಾಲೆ ಇರುವಲ್ಲಿನಲ್ಲಿ ನಡೆದ ನೂತನ ಕಟ್ಟಡದ ಶಿಲಾನ್ಯಾಸ, ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಜ್ಞಾನ ಪತ್ರವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಬಿಡುಗಡೆಗೊಳಿಸಿದರು. 

ನಂತರ ಮಾತನಾಡಿದ ಶಾಸಕ ಕೋಟ್ಯಾನ್, ಒಂದು ಕಾಲಘಟ್ಟದಲ್ಲಿ ಎಲ್ಲಾ ಕನ್ನಡ ಶಾಲೆಗಳು ಮುಚ್ಚುತ್ತವೆಯೋ ಎಂಬ ಆತಂಕವಿದೆ. ಆದರೆ , ಇದೀಗ, ಪ್ರತಿಯೊಂದು ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುತ್ತಿವೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು. 

   ನೂತನ ಕಟ್ಟಡ ನಿರ್ಮಾಣಕ್ಕೆ , ತಮ್ಮಿಂದ ಸಾಧ್ಯವಾದಷ್ಟು ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. 


ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಸಿಪ್ರಿಯನ್ ಮೊಂಟೆರೊ, ಎಸ್.ಡಿ.ಸಿ.ಸಿ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪನಾ ನಿರ್ದೇಶಕ ರಘರಾಮ್ ರಾವ್, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್, ಶಾಲಾ ಸಂಸ್ಥಾಪಕ ಕುಟುಂಬದ ಸದಸ್ಯೆ ಅನುರಾಧ ಭಟ್, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯವಾದಿ ಐ ತಾರಾನಾಥ್ ಪೂಜಾರಿ , ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಹೈಕಮಾಂಡ್ ವಕೀಲ ಐ ಚಂದ್ರಹಾಸ ಶೆಟ್ಟಿ, ಇನ್ನೋರ್ವ ಶಾಲಾ ಶತಮಾನೋತ್ಸವ ಗೌರವಾಧ್ಯಕ್ಷ ದಿವಾಕರ ಪ್ರಭು, ಶ್ರೀ ಕ್ಷೇತ್ರ ಇರುವ ದೇವಸ್ಥಾನದ 

ವ್ಯವಸ್ಥಾಪನ ಸಮಿತಿ ಅಧ್ಯ,ಕ್ಷ ಐ. ಕುಮಾರ್ ಶೆಟ್ಟಿ, ಗ್ರಾ. ಪಂ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಮಾಜಿ ತಾಲೂಕು ಪಂಚಾಯತ್ ಸದಸ್ಯ ರುಕ್ಕಯ್ಯ ಪೂಜಾರಿ ಅಳಿಯೂರು, ಉದ್ಯಮಿಗಳಾದ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಭುಜಂಗ ಆರ್ ಶೆಟ್ಟಿ ದೊಡ್ಡಗುತ್ತು, ಬಾರ್ದಿಲ ರೆಹಮಾನ್ ಮಸೀದಿ ಅಧ್ಯಕ್ಷ ಪಿ. ಎಂ ಆಲಿ, ಸದಾನಂದ ಹೆಗಡೆ ಸುಣ್ಣೋಣಿ, ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯಿನಿ ಕುಶಲ ಹಾಗೂ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಟಿ ಸ್ವಾಗತಿಸಿ, ಆರ್. ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ತಂಗಿಲ ಧನ್ಯವಾದಗೈದರು.

Post a Comment

0 Comments