2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೂಡಬಿದ್ರೆ ರೋಟರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು 169 ವಿದ್ಯಾರ್ಥಿಗಳಲ್ಲಿ 159 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.94.04 % ಫಲಿತಾಂಶ ದಾಖಲಿಸಿದೆ. ಈ ಪೈಕಿ 68 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ 77 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದ ಪಿ.ಸಿ.ಎಮ್.ಸಿ ಯಲ್ಲಿ ರಕ್ಷಿತಾ 600 ಕ್ಕೆ 593 ಅಂಕಗಳನ್ನು (ಶೇ. 98.83.%) ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ವಿಜ್ಞಾನ ವಿಭಾಗದ ಪಿ.ಸಿ.ಎಮ್.ಬಿ ಯಲ್ಲಿ ಶರಲ್ ಪ್ರೀತಿಕಾ ಸೆರೆವೂ 577 (ಶೇ. 96.16) ಅಂಕಗಳನ್ನು ಪಡೆದಿರುತ್ತಾಳೆ.
ವಾಣಿಜ್ಯ ವಿಭಾಗದ ಇ.ಬಿ.ಎ.ಸಿ ಯಲ್ಲಿ ಹಸನ್ ಸುಯೈಲ್ 589 (ಶೇ. 98.16)ಗಳಿಸಿ ಪ್ರಥಮ ಸ್ಥಾನ ಗಳಿಸಿರುತ್ತಾನೆ. ವಾಣಿಜ್ಯ ವಿಭಾಗದ ಇ.ಬಿ.ಎ.ಎಸ್ ನಲ್ಲಿ ಖುಶಿ ಯು. ಸಾಲಿಯಾನ್ 588 (ಶೇ. 97.83%) ಅಂಕಗಳನ್ನು ಪಡೆದಿರುತ್ತಾಳೆ.
ಉರ್ತ್ತೀಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿರುತ್ತಾರೆ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಚಾಲಕರು ಮತ್ತು ಸರ್ವಸದಸ್ಯರು, ಸಂಸ್ಥೆಯ ಪ್ರಾಂಶುಪಾಲರನ್ನು, ಉಪನ್ಯಾಸಕ ವೃಂದದವರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.
0 Comments