ಮೂಡುಬಿದಿರೆ: ವಿದ್ಯೆ ಇದ್ದವರು ವಿನಯವಂತರಾಗಿರುತ್ತಾರೆ ಎಂಬುದು ಮುಂಚಿನಿಂದಲೂ ಹಿರಿಯರು ಪಾಲಿಸಿಕೊಂಡು ಬಂದಂತಹ ಮಾತುಗಳು ಮಕ್ಕಳು ಉತ್ತಮ ರೀತಿಯಲ್ಲಿ ಪಾಠ ಕಲಿತು ಮುಂದಕ್ಕೆ ಹೆತ್ತವರಿಗೆ, ಗುರುಗಳಿಗೆ,ದೇಶಕ್ಕೆ ಹೆಸರು ತರಬೇಕೆಂದು ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದರು.
ಅವರು ಸೋಮವಾರ ಸ.ಹಿ.ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆಯಲ್ಲಿ ನಡೆದ ಶಾಲಾ ಆರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ಶಾಲೆಗೆ ಭಯದಿಂದ ಬರದೆ ಸಂತೋಷದಿಂದ ಇರಬೇಕೆಂಬ ಕಾರ್ಯಕ್ರಮವು ಮಕ್ಕಳಿಗಾಗಿ ವಿಶೇಷವಾದ ಜಾರಿಯಲ್ಲಿದೆ.
ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ಅಶೋಕ್ ಆಚಾರ್ಯ, ತ್ರಿಭವನ ಹೋಟೆಲ್ ಮಾಲಕ ಪೃಥ್ವಿರಾಜ್ ಜೈನ್, ಹಾಗೂ ಶಿಕ್ಷಕರು, ಪೂರಕ, ಮಕ್ಕಳು.
ಶಾಲಾ ಮುಖ್ಯೋಪಾಧ್ಯಾಯಿನಿ ಸೇಸಮ್ಮ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸಂಗೀತಾ ಕುಮಾರಿ ಧನ್ಯವಾದಗೈದರು.
0 Comments