ಮೂಡುಬಿದಿರೆ: ಇಂದು ಸುರಿದ ಭಾರೀ ಮಳೆಗೆ ಮೂಡುಬಿದಿರೆಯ ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲದ ಉಮಿಲುಕ್ಕು ಎಂಬಲ್ಲಿ ಮನೆಗೆ ತೆಂಗಿನ ಮರ ಬಿದ್ದು ಮನೆ ಭಾಗಶಃ ಧ್ವಂಸಗೊಂಡ ಘಟನೆ ಪಣಪಿಲದಲ್ಲಿ ನಡೆದಿದೆ.
ಸುಮಾರು ಎರಡು ಮೂರು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯ ಬಳಿ ಇದ್ದ ಬೃಹತ್ ಗಾತ್ರದ ತೆಂಗಿನ ಮರವೊಂದು ಮನೆಯ ಮೇಲೆ ಬಿದ್ದು ಮನೆ ಧ್ವಂಸಗೊಂಡಿದ್ದು ನಿವಾಸಿಗಳಾದ ಸದಾನಂದ ಪೂಜಾರಿ ಮತ್ತು ಅವರ ಪತ್ನಿ ಯಶೋಧ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಸಿ ಮೂಲ್ಯ, ಸದಸ್ಯರಾದ ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ,ಮೂಡುಬಿದಿರೆ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅಶ್ವಥ್ ಪಣಪಿಲ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 Comments