ಪುತ್ತಿಗೆ : ಸೋಮನಾಥೇಶ್ವರ ದೇವಸ್ಥಾನ:ಬಾಲಾಲಯಕ್ಕೆ ಬಿಂಬಗಳು


ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ:  ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ  ದೇವಸ್ಥಾನದ  ಜೀರ್ಣೋದ್ಧಾರ ಕಾರ್ಯದ ಪೂರ್ವಭಾವಿಯಾಗಿ ಶುಕ್ರವಾರ ಸಪರಿವಾರ ಶ್ರೀ ಸೋಮನಾಥೇಶ್ವರ ದೇವರ ಬಿಂಬಗಳನ್ನು ಬಾಲಾಲಯಕ್ಕೆ ಸ್ಥಾನಾಂತರಿಸುವ ಪ್ರಕ್ರಿಯೆ ಎಡಪದವು ತಂತ್ರಿವರೇಣ್ಯರ ಮಾರ್ಗದರ್ಶನದಲ್ಲಿ ನಡೆಯಿತು.

ಶ್ರೀ ಸೋಮನಾಥೇಶ್ವರ ದೇವರಿಗೆ  ಗುರುವಾರ ೪೯ ಕಲಶ, ದುರ್ಗಾ ಪರಮೇಶ್ವರೀ ದೇವಿಗೆ ೨೫ ಕಲಶ, ಗಣಪತಿ ದೇವರಿಗೆ ೨೫ ಕಲಶ ಅಭಿಷೇಕ ಸಹಿತ ಪ್ರಾಯಶ್ಚಿತ್ತ ಹೋಮಾದಿ, ಮೃತ್ಯುಂಜಯ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮ, ಎಳನೀರ ಅಭಿಷೇಕ, ಮಹಾಪೂಜೆ ನೆರವೇರಿಸಲಾಯಿತು. ಸಂಜೆ  ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಾಸಾದ ಶುದ್ಧಿ, ದಿಕ್ಪಾಲಕ ಬಲಿ, ಪ್ರಾಯಶ್ಚಿತ್ತ ಹೋಮ ನಡೆದವು.

ಶುಕ್ರವಾರ ತತ್ವ ಹೋಮ, ಜೀವ ಕಲಶ, ಗೋಪೂಜೆ, ಬಿಂಬಗಳ ಚಾಲನೆಯಾಗಿ ಬಾಲಾಲಯ ಪ್ರವೇಶ ಜರಗಿತು.  ನವಕ ಕಲಶ, ದೇವಾಲಯ ನಿರ್ಮಾಣವಾಗುವಲ್ಲಿಯವರೆಗೆ ಸೀಮಿತ ಪೂಜಾ ವಿಧಿಗಳು, ಭಜಕರು ಪಾಲಿಸಬೇಕಾದ ನಿಯಮಾವಳಿಗಳನ್ನು  ಪ್ರಕಟಿಸಿ ಸೇರಿದ್ದ  ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಆನುವಂಶಿಕ ಆಡಳಿತೆದಾರ ಚೌಟರ ಅರಮನೆ, ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಕುಂಗೂರು ಶಿವಪ್ರಸಾದ್ ಆಚಾರ್ಯ, ವೈದಿಕ ವೃಂದ, ಡಾ. ಪದ್ಮನಾಭ ಉಡುಪ, ಕಟೀಲು ಕ್ಷೇತ್ರದ ವೇ.ಮೂ. ಲಕ್ಷ್ಮಿ ನಾರಾಯಣ ಆಸ್ರಣ್ಣರು, ಕಾರ್ಯಾಧ್ಯಕ್ಷ ,ಶಾಸಕ ಉಮಾನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ಎಂ. ಮೋಹನ ಆಳ್ವ, ಜತ ಕಾರ್ಯದರ್ಶಿಗಳಾದ  ಶ್ರೀಪತಿ ಭಟ್, ವಿದ್ಯಾರಮೇಶ ಭಟ್, ವಾದಿರಾಜ ಮಡ್ಮಣ್ಣಾಯ,  ಜಯಶ್ರೀ ಅಮರನಾಥ ಶೆಟ್ಟಿ,  ಉಪಾಧ್ಯಕ್ಷ  ಎಚ್. ಧನಕೀರ್ತಿ ಬಲಿಪ, ಕಾರ್ಯದರ್ಶಿ ಶ್ರೀಕಾಂತ ರಾವ್ ಪುತ್ತಿಗೆ , ಜಿ.ಪಂ. ಮಾಜಿ ಸದಸ್ಯ ಸುಚರಿತ ಶೆಟ್ಟಿ, ವಿವಿಧಸ್ತರಗಳ ಜನಪ್ರತಿನಿಧಿಗಳು, ಸಮಿತಿ,ಸಂಘಟನೆಗಳ  ಸದಸ್ಯರು, ದೇವಸ್ಥಾನದ ಸಿಬಂದಿ,  ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.

೦೬೦೫ ಬಾಲಾಲಯ

ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಬಾಲಾಲಯಕ್ಕೆ ಬಿಂಬಗಳನ್ನು ಸ್ಥಾನಾಂತರಿಸಲಾಯಿತು.

Post a Comment

0 Comments