ಮೂಡುಬಿದಿರೆ: ಮಂಡ್ಯ ಜಿಲ್ಲೆಯ ಕಂಬದಹಳ್ಳಿ ಚತುರ್ಮುಖ ಬಸದಿಯ ಪಂಚ ಕಲ್ಯಾಣ ಮಹೋತ್ಸವ-2022 ರಲ್ಲಿ
ಶ್ರೀ ಜೈನ ಮಠ ಕಂಬದಹಳ್ಳಿ ಹಾಗೂ ಪದ್ಮಶ್ರೀ ಜೈನ ಮಹಿಳಾ ಸಮಾಜ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಜೈನ ಮಹಿಳಾ ಸಮ್ಮೇಳನ-2022ರಲ್ಲಿ ಧಾರ್ಮಿಕ, ಸಾಮಾಜಿಕ, ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ದ.ಕ ಹಾಗೂ ಉಡುಪಿ ಜಿಲ್ಲೆಯ ಸಾಧಕಿಯಾಗಿ ವಕೀಲೆ ಶ್ವೇತಾ ಜೈನ್ ಮೂಡಬಿದ್ರೆ ಅವರಿಗೆ "ಸಮಾಜ ರತ್ನ"(ಬಿರುದು) ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪದ್ಮಶ್ರೀ ಜೈನ ಮಹಿಳಾ ಸಮಾಜ ಮೈಸೂರು ಇದರ ಅಧ್ಯಕ್ಷೆ ಲತಾ ಸುದರ್ಶನ್ ಸಹಿತ ಅನೇಕ ಗಣ್ಯರು.
0 Comments