ಉತ್ತರ ಕನ್ನಡ:ಖಾಕಿ ಚಡ್ಡಿ ಕಪ್ಪು ಟೋಪಿ ಹಾಕಿಕೊಂಡು ದೇಶವನ್ನು ರಕ್ಷಿಸುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರ ಆರ್.ಎಸ್.ಎಸ್ ವಿರುದ್ಧದ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೋಟ, ರಾಷ್ಟ್ರೀಯ ಸೇವಕ ಸಂಘದ ಕಾರ್ಯವನ್ನು ಗುರುತಿಸಿ ದೇಶದ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಅವರು ಪಥ ಸಂಚಲನಕ್ಕೆ ಆಹ್ವಾನ ನೀಡಿದರು. ಹಾಗಾದರೆ ಬಿ.ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯರವರು ನೆಹರುರವರನ್ನು ವಿರೋಧಿಸುತ್ತಾರೆಯೇ?
ಹಿಂದೊಮ್ಮೆ ಪ್ರಣಮ್ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಹ್ವಾನವನ್ನು ಒಪ್ಪಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಮುಖ ಭಾಷಣ ಮಾಡಿದರು ಹಾಗೂ ಸಂಘವನ್ನು ಹಾಡಿ ಹೊಗಳಿದ್ದರು. ಹಾಗಾದರೆ ಪ್ರಣಮ್ ಮುಖರ್ಜಿ ಅವರನ್ನು ಬಿ. ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ವಿರೋಧಿಸುತ್ತಾರೆಯೇ?
ಬಿ. ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ನೆಹರು ಅವರನ್ನು ವಿರೋಧಿಸುತ್ತಾರಾದರೆ ನೇರವಾಗಿ ಹೇಳಿ ಬಿಡಲಿ. ಇಲ್ಲವಾದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವನ್ನು ಒಪ್ಪಿಕೊಳ್ಳಲಿ ಸವಾಲು ಹಾಕಿದ್ದಾರೆ.
ಒಂದೋ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿರೋಧಿಸಲಿ ಅಥವಾ ನೆಹರು, ಪ್ರಣಮ್ ಮುಖರ್ಜಿ ಅವರನ್ನು ವಿರೋಧಿಸಲಿ ಯಾವುದನ್ನಾದರೂ ಬಹಿರಂಗವಾಗಿ ಹೇಳಿ ಬಿಡಲಿ ಎಂದು ಸಚಿವ ಕೋಟ ತಿರುಗೇಟು.
ಹರಿಪ್ರಸಾದ್ ಅವರು ನೀಡಿರುವ ಹೇಳಿಕೆ ಅವರ ಯೋಗ್ಯತೆಗೆ ತಕ್ಕುದಾದಲ್ಲ. ಟೀಕಿಸುವದಕ್ಕೂ ಮಿತಿ ಇದೆ. ಅತೀ ಕೆಳಮಟ್ಟದ ಟೀಕೆ ಒಳ್ಳೆಯದಲ್ಲ ಎಂಬ ಕಿವಿ ಮಾತನ್ನು ಸಚಿವ ಕೋಟ ಹೇಳಿದರು.
ಇತ್ತೀಚೆಗೆ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಟೀಕೆಯ ಸುರಿಮಳೆಗೈದಿದ್ದರು. ಖಾಕಿ ಚಡ್ಡಿ, ಕಪ್ಪು ಟೋಪಿಯಿಂದ ದೇಶ ಉದ್ಧಾರ ಆಗಲ್ಲ ಎಂದು ಹೇಳಿದ್ದರು.
0 Comments