ಮಸೀದಿಗಳಿಂದ ಧ್ವನಿವರ್ಧಕಗಳನ್ನು ಬಳಸುವ ಕುರಿತು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯೂ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿದೆ. ಈ ಮೊದಲು ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಧ್ವನಿವರ್ಧಕ ಬಳಕೆ ಮೂಲಭೂತ ಹಕ್ಕಲ್ಲ ಎಂದಿದ್ದು ಅರ್ಜಿಯನ್ನ ವಜಾ ಮಾಡಿದೆ. ಮೂಲಭೂತವಾಗಿ, ಅಜಾನ್ ಸಮಯದಲ್ಲಿ ಹಳ್ಳಿಯ ಮಸೀದಿಯಲ್ಲಿ ಧ್ವನಿವರ್ಧಕ/ಮೈಕ್ ನುಡಿಸಲು ಅನುಮತಿ ಕೋರಿ ಇರ್ಫಾನ್ ಎಂಬುವರು ಅರ್ಜಿ ಸಲ್ಲಿಸಿದ್ದರು.
0 Comments