ರೈತರ ಸಂಕಷ್ಟಕ್ಕೆ ಸಹಕಾರಿ ಸಂಘ ಸ್ಪಂದನೆ-ರಾಜೇಂದ್ರ ಕುಮಾರ್


ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ : ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ)ವು ಸುಮಾರು ೧.೧೦ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡ "ರೈತ ಸಿರಿ"ಯನ್ನು  ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ ಎಂ.ಎನ್.ರಾಜೇಂದ್ರ ಕುಮಾರ್ ಶುಕ್ರವಾರ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಸಹಕಾರಿ ರಂಗಕ್ಕೆ ಶತಮಾನಗಳ ಇತಿಹಾಸವಿದೆ. ವಾಣಿಜ್ಯ ಬ್ಯಾಂಕ್‌ಗಳ ಹಿನ್ನೆಲೆ ಇತ್ತೀಚಿನದ್ದು. ರಾಷ್ಟ್ರೀಕೃತ ಬ್ಯಾಂಕ್‌ಗಳ ಠೇವಣಿಯ ಹಣವು ಶ್ರೀಮಂತರಿಗೆ ಸಾಲದ ರೂಪದಲ್ಲಿ ನೀಡಲಾಗುತ್ತಿದ್ದರೆ ಸಹಕಾರಿ ಕ್ಷೇತ್ರದಲ್ಲಿ ಇಟ್ಟ ಠೇವಣಿ ಹಣವು ರೈತರಿಗೆ ಸಾಲದ ರೂಪದಲ್ಲಿ ವಿತರಣೆಯಾಗುತ್ತಿದೆ. ರೈತರು ಸಕಾಲದಲ್ಲಿ ಸಾಲ ಮರುಪಾವತಿಸುವುದರಿಂದ ಸಹಕಾರಿ ಕ್ಷೇತ್ರವೂ ಬಲಿಷ್ಠವಾಗಿದೆ. ರೈತರ ಸಂಕಷ್ಟಗಳಿಗೆ ಸಹಕಾರಿ ಸಂಸ್ಥೆಗಳೂ ಸ್ಪಂದಿಸುತ್ತಿದೆ. ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘವು ಹಿರಿಯ ಸಹಕಾರ ಸಂಸ್ಥೆಯಾಗಿದ್ದು ಈ ಕಟ್ಟಡಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ೧೦ ಲಕ್ಷ ರೂ ನೆರವು ನೀಡಲಾಗುವುದು.  ನವೋದಯ ಸ್ವಸಹಾಯ ಸಂಘದ ಸದಸ್ಯರು ಸ್ವಾವಲಂಬಿಗಳಾಗಿ ಬದುಕನ್ನು ಸಾಗಿಸಲು ತಂಡಕ್ಕೆ ರೂ ೨೦ಲಕ್ಷ ಸಾಲವನ್ನು  ಹಾಗೂ ವಾರದೊಳಗೆ ಸೀರೆಯನ್ನು ವಿತರಿಸಲಾಗುವುದು ಎಂದು ಹೇಳಿದರು.

ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಸಹಕಾರಿ ಕ್ಷೇತ್ರದ ಬೆಳವಣಿಗೆ ಊರಿನ ಪ್ರಗತಿಗೆ ಪೂರಕವಾಗುತ್ತದೆ. ಸಿಬ್ಬಂದಿಗಳು ಮತ್ತು ಗ್ರಾಹಕರು ಪ್ರಾಮಾಣಿಕವಾಗಿದ್ದಾಗ ಸಹಕಾರಿ ಸಂಸ್ಥೆಗಳು ಉನ್ನತಿ ಸಾಧಿಸಲು ಸಾಧ್ಯ. ವ್ಯವಹಾರದೊಂದಿಗೆ ಗ್ರಾಮೀಣ ಪ್ರತಿಭಾವಂತರನ್ನು, ಸಾಧಕ ರೈತರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು. 

ಶಾಸಕ ಉಮಾನಾಥ ಕೋಟ್ಯಾನ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಪೋಟಿಯ ನಡುವೆಯೂ ಸಹಕಾರಿ ಸಂಸ್ಥೆಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಸಿಬ್ಬಂದಿಗಳು ಗ್ರಾಹಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿರಬೇಕು. ಗ್ರಾಹಕರ ಸಟ

ಸಮಸ್ಯೆ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು. 

ಮಾಜಿ ಶಾಸಕ ಕೆ.ಅಭಯಚಂದ್ರ ಜೈನ್ ಭದ್ರತಾ ಕೊಠಡಿಯನ್ನು, ಜಯಶ್ರೀ ಅಮರನಾಥ ಶೆಟ್ಟಿ ಗೋದಾಮನ್ನು ಉದ್ಘಾಟಿಸಿದರು. 

೨ ಹೊಸ ನವೋದಯ ಸ್ವಸಹಾಯ ಗುಂಪುಗಳಿಗೆ ದಾಖಲೆ ಪತ್ರಗಳನ್ನು ಹಸ್ತಾಂತರಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ,  

ನಬಾರ್ಡ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸಂಗೀತ , 

 ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪಾಲಡ್ಕ ಗ್ರಾ.ಪಂ. ಅಧ್ಯಕ್ಷ ದಿನೇಶ್ ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕ ಭಾಸ್ಕರ ಎಸ್ ಕೋಟ್ಯಾನ್, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉಮೇಶ್ ಅಡಿಗಳ್, ಉದ್ಯಮಿ ಮಿತ್ತಬೈಲು ಎಂ.ಗೋವರ್ಧನ್ ನಾಯಕ್, ಸುದರ್ಶನ್ ಶೆಟ್ಟಿ ಭಾಗವಹಿಸಿದರು. 

ಇದೇ ಸಂದರ್ಭದಲ್ಲಿ ಕಟ್ಟಡದ ಸ್ಥಳ ದಾನಿ ದಿನೇಶ್ ಕುಮಾರ್ ಆನಡ್ಕ ಹಾಗೂ ಪುತ್ತಿಗೆ ಸಹಕಾರಿ ಸಂಘದಲ್ಲಿ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿಯಾಗಿ ನಿವೃತ್ತರಾದ ಕೆ. ನಾಗರಾಜ ಭಟ್, ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಪಿ.ಸುಚರಿತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಕಟ್ಟಡದ ನಿರ್ಮಾಣದ ಗುತ್ತಿಗೆದಾರರು ಹಾಗೂ ಸಹಕಾರ ನೀಡಿದವರನ್ನು ಗೌರವಿಸಲಾಯಿತು. 

ವೇದಿಕೆಯಲ್ಲಿ ನಿರ್ದೇಶಕರಾದ ಕೆ.ಪಿ.ಸುಚರಿತ ಶೆಟ್ಟಿ, ನಾರಾಯಣ ಮಡಿವಾಳ, ಕೆ.ಬಿ.ಶಿವದತ್ತ, ವಿಠಲ ನಾಯ್ಕ್, ಪೌಲ್ ಡಿಸೋಜ, ಸುಕೇಶ್ ಪೂಜಾರಿ, ಸಂದೀಪ್ ಪೂಜಾರಿ, ನೀರಜಾಕ್ಷಿ ಶೆಟ್ಟಿ, ಹೆಲೆನ್ ಡಿಸೋಜ, ಎಸ್‌ಸಿಡಿಸಿಸಿಯ ವಲಯ ಮೇಲ್ವಿಚಾರಕ ಸಂಜಯ್ ಉಪಸ್ಥಿತರಿದ್ದರು. 

ಕೆ.ಎಂ.ಎಫ್ ಅಧ್ಯಕ್ಷ ಸುಚರಿತ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ತೃಪ್ತಿ ವಂದಿಸಿದರು. ಸುಹಾಸ್ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು.

Post a Comment

0 Comments