ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ಕಾಲೇಜು ಮತ್ತು ಆಸ್ಪತ್ರೆ, ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ನರರೋಗ ಸಂಬಂಧಿತ ಖಾಯಿಲೆಗಳ ಉಚಿತ ವೈದ್ಯಕೀಯ ಶಿಬಿರವು ಸೋಮವಾರದಂದು ಆರಂಭಗೊಂಡಿತು. ಶಿಬಿರದ ಉದ್ಘಾಟನೆಯನ್ನು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಜಿತ್ ಎಂ. ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಮಂಜುನಾಥ ಭಟ್, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ವಿಕ್ರಮ್ ಕುಮಾರ್ ಹಾಗೂ ಇತರ ಪ್ರಾಧ್ಯಾಪಕರು ಇದ್ದರು.
ಕಾಲೇಜಿನ ಪಂಚಕರ್ಮ ವಿಭಾಗದ ಪ್ರಾಧ್ಯಾಪಿಕೆ ಡಾ. ರೋಹಿಣಿ ಪುರೋಹಿತ್ ಕಾರ್ಯಕ್ರಮ ನಿರೂಪಿಸಿದರು.
ಏಪ್ರಿಲ್ 11 ರಿಂದ 17 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಪಾರ್ಶ್ವವಾಯು, ಬೆಲ್ಸ್ ಪಾಲ್ಸಿ, ಕಂಪವಾತ, ಸಯಾಟಿಕಾ, ಡಿಸ್ಕ್ ಅಸ್ವಸ್ಥತೆಗಳು ಮತ್ತು ನೋವುಗಳು, ನರದೌರ್ಬಲ್ಯ, ಮರಗಟ್ಟುವಿಕೆ, ಬಲಹೀನತೆ ಮುಂತಾದ ನರ ಸಂಬಧಿ ರೋಗಗಳಿಗೆ ಉಚಿತ ತಪಾಸಣೆ, ಸಲಹೆ, ಜೀವನಶೈಲಿ, ಆಹಾರ ಸವಿವರ ಸಂಪೂರ್ಣ ತಪಾಸಣೆ. ಅಗತ್ಯವಿದ್ದಲ್ಲಿ ಪಂಚಕರ್ಮ ಚಿಕಿತ್ಸೆ ಹಾಗೂ ಒಳರೋಗಿ ವಿಭಾಗದಲ್ಲಿ ಆಯ್ಕೆ ರಿಯಾಯತಿ ದರದಲ್ಲಿ ಒದಗಿಸಲಾಗಿದೆ. ಸಾರ್ವಜನಿಕರು ಈ ಉಚಿತ ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ.
0 Comments