ಬೆಂಗಳೂರು : ಬಿರು ಬೇಸಿಗೆಯ ಬಿಸಿ ಮತ್ತಷ್ಟು ಹೆಚ್ಚಿಸುವಂತೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಜನರನ್ನು ಸುಡುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ (Electricity Bill) ಏರಿಕೆ ಸರದಿ. ಈ ತಿಂಗಳಿನಿಂದಲೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ ಬರೋಬ್ಬರಿ 35 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಇದರಿಂದ ಜನರು ಈಗ ಪಾವತಿಸುವ ಬಿಲ್ ಗಿಂತ ಶೇ. 4.33ರಷ್ಟು ಹೆಚ್ಚು ದುಡ್ಡು ತೆರಬೇಕಾಗಿದೆ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಎಲ್ಲಾ ನಿಗಮಗಳಲ್ಲೂ ಸರಾಸರಿ 35 ಪೈಸೆ ಹೆಚ್ಚಳ ಮಾಡಲಾಗಿದೆ.
ಇನ್ನು ಕೇವಲ ಮನೆಬಳಕೆ ವಿದ್ಯುತ್ ದರ ಏರಿಸಲಾಗಿದೆ. ಆದರೆ ಈಗ ಹೆಚ್ಚು ಜನಪ್ರಿಯವಾಗುತ್ತಿರುವ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಹೆಚ್ಚಳ ಮಾಡಿಲ್ಲ. ಜೊತೆಗೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವರುಷದವರೆಗೆ ಪ್ರತಿ ಯೂನಿಟ್ ಗೆ 50 ಪೈಸೆ ರಿಯಾಯಿತಿ. ಮಳೆಗಾಲದಲ್ಲಿ ಸಂಜೆ 4ರಿಂದ ರಾತ್ರಿ 10ರವರೆಗೆ ವಿದ್ಯುತ್ ದರ ಸಡಲಿಕೆ ಮುಂದುವರಿಕೆ. ಹೈಟೆನ್ಶನ್ ವಿದ್ಯುತ್ ಗ್ರಾಹಕರಿಗೆ ರಾತ್ರಿ 10 ಬೆಳಗಿನವರೆಗೆ ಪ್ರತಿ ಯೂನಿಟ್ ಗೆ 2 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ.
ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು 11320 ಕೋಟಿ ಕಂದಾಯ ಕೊರತೆ ನೀಗಿಸಲು ಪ್ರತಿ ಯೂನಿಟ್ ಗೆ ಸರಾಸರಿ 1.85 ಪೈಸೆ ಹೆಚ್ಚಳ ಮಾಡಲು ಅಂದ್ರೆ ಶೇ.23.83ರಷ್ಟು ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದವು. 2023 ವರ್ಷ 2159 ಕೋಟಿ ಕಂದಾಯ ಕೊರತೆ ನೀಗಿಸಲು ಪ್ರತಿ ಯೂನಿಟ್ ಗೆ 5 ಪೈಸೆ ಇಂಧನ ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಒಟ್ಟಿನಲ್ಲಿ ರಾಜ್ಯದ ಜನರು ಇನ್ಮುಂದೇ ಕರೆಂಟ್ ಮುಟ್ಟಿ ಶಾಕ್ ಹೊಡೆಸಿಕೊಳ್ಳೋ ಬದಲು ಕರೆಂಟ್ ಬಿಲ್ ನೋಡಿಯೇ ಶಾಕ್ ಹೊಡೆಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
0 Comments