ಮೂಡುಬಿದಿರೆ: ಮೀಸಲು ಅರಣ್ಯ ಜಮೀನಿನಲ್ಲಿ ಮನೆ ಕಟ್ಟಿದಂತಹ ಜನರಿಗೆ ಭೂಮಿಯನ್ನು ಸ್ವಂತವಾಗಿಸಲು ಸುಪ್ರೀಂ ಕೋರ್ಟ್ ಗೆ ಆಫಿದಾವಿಟ್ ಸಲ್ಲಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮೂಡುಬಿದಿರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಆಡಳಿತ ಸೌಧವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದ ಈ ಕ್ರಮದಿಂದಾಗಿ 6.5 ಲಕ್ಷ ಕುಟುಂಬಕ್ಕೆ ಪ್ರಯೋಜನವಾಗಲಿರುವುದಾಗಿ ತಿಳಿಸಿದರು.
ಅನೇಕ ವರ್ಷಗಳಿಂದ ಕರಾವಳಿ ಪ್ರದೇಶದಲ್ಲಿ ಅರಣ್ಯ ಪ್ರದೇಶದಲ್ಲಿ ಸೂರು ನಿರ್ಮಿಸಿದ್ದ ಬಡ ಜನರಿಗೆ ಕಿರುಕುಳ ಕೊಡುತ್ತಿದ್ದದ್ದು ನನ್ನ ಗಮನದಲ್ಲಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅತಿ ಶೀಘ್ರದಲ್ಲಿ ಬಡ ಜನತೆಗೆ ಹಕ್ಕು ಪತ್ರ ದೊರೆಯಲಿದೆ ಎಂದು ಘೋಷಿಸಿದರು.
0 Comments