ಶಾಸಕರ‌ ಬೇಡಿಕೆಗೆ ಮನ್ನಣೆ ನೀಡಿದ ಸಿಎಂ ಬೊಮ್ಮಾಯಿ:ವೇದಿಕೆಯಲ್ಲೇ ಅಸ್ತು ಎಂದ ಮುಖ್ಯಮಂತ್ರಿಗಳು

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಬಹುಬೇಡಿಕೆಯ ಮೂಡುಬಿದಿರೆಯ  ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯಕೇಂದ್ರವಾಗಿ ಸುಸಜ್ಜಿತವಾಗಿ ಮೇಲ್ದರ್ಜೆಗೇರಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾರೀ ಕರತಾಡನದ ನಡುವೆ ಘೋಷಿಸಿದರು.

ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಜನಸ್ಹೇಹಿಯಾಗಿ ಜನೋಪಯೋಗಿ ಕಾರ್ಯಗಳನ್ನು ಮಾಡುವುದು ರಾಜ್ಯಸರಕಾರದ ಗುರಿಯಾಗಿದೆ. ಮೂಡುಬಿದಿರೆಯ ಶಾಸಕರು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆಂದು ಶ್ಲಾಘಿಸಿದರು. ಜನತೆ ಶ್ರೀಮಂತರಾದರೆ ರಾಜ್ಯ ಶ್ರೀಮಂತವಾಗಲು ಸಾಧ್ಯ. ದುಡಿಯುವ ಸಾಮಥ್ರ್ಯ ಜನತೆಗೆ ಒದಗಿಸುವ ಕಾರ್ಯ ನಡೆಯಬೇಕು. ಎಂದು ವ್ಯಾಖ್ಯಾನಿಸಿದರು.

 ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಕನಸು ಈಡೇರಿಸಿದ ತೃಪ್ತಿ ನನಗಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಮನದುಂಬಿ ಮಾತನಾಡಿದರು. ನಾಲ್ಕು ವರುಷಗಳಲ್ಲಿ ಒಂದು ಸಾವಿರ ಕೋಟಿಗೂ ಮಿಕ್ಕಿದ ಅನುದಾನವನ್ನು ಕ್ಷೇತ್ರಕ್ಕೆ ನೀಡಿದ ತೃಪ್ತಿ ಇದೆ ಎಂದರು 

ಸಂಸದ ನಳೀನ್ ಕುಮಾರ್ ಕಟೀಲು, ಸಚಿವ ಸುನಿಲ್ ಕುಮಾರ್ ಉಮಾನಾಥ್ ಕೋಟ್ಯಾನ್ ಅವರ ಸೇವೆಯನ್ನು ಶ್ಲಾಘಿಸಿದರು.

ಸಚಿವರಾದ ಎಸ್ ಅಂಗಾರ, ಕೋಟ ಶ್ರೀನಿವಾಸ್ ಪೂಜಾರಿ, ವಿ ಸೋಮಣ್ಣ, ಡಾ.ಸುಧಾಕರ್, ಡಿ ಸಿ ನಾಗೇಶ್, ಮಟ್ಟಾರು ರತ್ನಾಕರ ಹೆಗಡೆ, ರಾಜೇಶ್ ನಾಯಕ್ ಉಳೆಪಾಡಿಗುತ್ತು, ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಘುಪತಿ ಭಟ್, ಹರಿಕೃಷ್ಣ ಬಂಟ್ವಾಳ್, ಸಂತೋಷ್, ನಿತಿನ್ ಕುಮಾರ್ ರವೀಂದ್ರ ಶೆಟ್ಟಿ, ರವಿಶಂಕರ್, ಸುದರ್ಶನ್ ಎಂ, ಡಾ.ಎಂ.ಮೋಹನ ಆಳ್ವ, ಜೋಯ್ಲೆಸ್ ಡಿಸೋಜ, ಪ್ರಸಾದ್ ಕುಮಾರ್ ಮೊದಲಾದವರಿದ್ದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಸ್ವಾಗತಿಸಿದರು. ಇದೇ ಸಂದರ್ಭ ಶಾಸಕರ ನಾಲ್ಕು ವರುಷಗಳ ಸಾಧನೆಯ ಕೈಪಿಡಿ ಕಾಯಕಲ್ಪದ ಸೇವಕ ಅನಾವರಣಗೊಂಡಿತು.



Post a Comment

0 Comments