ಯುವ ಉದ್ಯಮಿ ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment



ಮೂಡುಬಿದಿರೆ : ಇಲ್ಲಿಗೆ ಸಮೀಪದ ಮೂಡುಕೊಣಾಜೆಯ ನಿವಾಸಿ ಯುವ ಉದ್ಯಮಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

ಮೂಡುಕೊಣಾಜೆಯ ರಾಘವ ಸುವರ್ಣ ಅವರ ಪುತ್ರ ರೋಶನ್ ಆರ್ ಸುವರ್ಣ ಆತ್ಮಹತ್ಯೆ ಮಾಡಿಕೊಂಡ ಯುವ ಉದ್ಯಮಿ. ಕಳೆದ ಯುಗಾದಿಯಂದು ಮೂಡುಬಿದಿರೆಯಲ್ಲಿ " ಅಬ್ಬಕ್ಕ" ಎಂಬ ಹೆಸರಿನಲ್ಲಿ ಆರಂಭಗೊಂಡಿರುವ ಬೇಕರಿಯಲ್ಲಿ ಪಾಲುದಾರರಾಗಿದ್ದು ಚಿತ್ರನಟ ವಿಜಯ ರಾಘವೇಂದ್ರ ಅವರನ್ನು ಕರೆಸಿ ಬೇಕರಿಯನ್ನು ಉದ್ಘಾಟನೆಗೊಳಿಸಿದ್ದರು.

 ಮಂಗಳವಾರ ಬೆಳಿಗ್ಗೆ 11 ಗಂಟೆಯವರೆಗೆ ಬೇಕರಿಯಲಿದ್ದ ಅವರು ನಂತರ ಮನೆಗೆ ಹೋಗಿದ್ದರು. ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಮೊದಲು ಡಿಸೈನಿಂಗ್ ಅಂಗಡಿಯಲ್ಲಿ ಮತ್ತು ಪ್ರೀತಿ ಕೆಟರರ್ಸ್ ನಲ್ಲಿ ಸಿಬಂದಿಯಾಗಿ ದುಡಿಯುತ್ತಿದ್ದರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments