ಉಡುಪಿ: 'ಅವರವರ ವಿಚಾರಗಳನ್ನು ಪ್ರಚಾರ ಮಾಡುವ ಅವಕಾಶ ಇದೆ. ಆದರೆ ಅದರ ಉದ್ದೇಶದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಲ್ಲಿ ಮಾತ್ರ ಸರ್ಕಾರ ಸಹಿಸುವುದಿಲ್ಲ ಎಂಬ ಸ್ಪಷ್ಟ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದೇನೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಉಡುಪಿ ಜಿಲ್ಲೆಗೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ವ್ಯವಸ್ಥೆಯ ಬಗ್ಗೆ ಸಿಎಂ ಮೌನವಾಗಿದ್ದಾರೆ ಎಂದು ವಿಪಕ್ಷ ಮಾತಾಡ್ತಾ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ನಾನು ಮಾತಾಡದೇ ಇರಬಹುದು, ಆದ್ರೆ ನನ್ನ ಆ್ಯಕ್ಷನ್ ಮಾತಾಡ್ತ ಇದೆ ಅಷ್ಟು
ಯಾವಾಗಲು ಮಾತಾಡುವುದಕ್ಕಿಂತ
ಕೆಲಸದಲ್ಲಿ ತೋರಿಸಬೇಕು, ಇವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ ಎಂದರು.
ಹಲವಾರು ಕೊಲೆಗಳಿಗೆ ನೇರ ಹೊಣೆಯಾಗಿ ಸರ್ಕಾರದ ತನಕ ಅದನ್ನು ತೆಗೆದುಕೊಂಡು ಹೋಗಿ ಅರ್ಧದಲ್ಲೇ ಕೈ ಬಿಟ್ರಲ್ಲಾ ಆವಾಗ ಇವರಿಗೆ ಎಲ್ಲಿತ್ತು ಕರ್ತವ್ಯ ಪ್ರಜ್ಞೆ ...? ಇವರಿಂದ ಕಲಿಯಬೇಕಿರುವುದು ಏನಿಲ್ಲ. ಯಾವ ಸಂದರ್ಭದಲ್ಲಿ , ಹೇಗೆ ಮಾತನಾಡಬೇಕು ಮತ್ತು ಶಾಂತಿ ಕಾನೂನು ಸುವ್ಯವಸ್ಥೆ ಹೇಗೆ
ಕಾಪಾಡಿಕೊಳ್ಳಬೇಕು ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ' ಎಂದು ಹೇಳಿದರು.
ಇನ್ನು ಲವ್ ಜಿಹಾದ್ ವಿಷಯವಾಗಿ
ಮಾತನಾಡಿದ ಅವರು 'ಮಂಗಳೂರಿನಲ್ಲಿ ಲವ್ ಜಿಹಾದ್ ವಿರುದ್ಧ ಟಾಸ್ಕ್ ಫೋರ್ಸ್ ರಚನೆ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ತಪ್ಪು ವಿಶ್ಲೇಷಣೆ ಸರಿಯಲ್ಲ. ಅವರವರ ರಕ್ಷಣೆ ಮಾಡಿಕೊಳ್ಳಲು ಅವರು ಸ್ವತಂತ್ರರು. ಸರಕಾರ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಕೆಲವೊಂದು ಕಾನೂನುಗಳನ್ನು ಹಿಂದಿನ ಸರ್ಕಾರವೇ ಜಾರಿಮಾಡಿದೆ. ನಾವೇನು ಹೊಸ ಕಾನೂನುಗಳನ್ನು ಮಾಡಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುತ್ತಿದ್ದೇವೆ
ಅಷ್ಟೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಧ್ಯಮದವರು ಇತ್ತೀಚೆಗೆ ನಡೆಯುತ್ತಿರುವ ಧರ್ಮ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ
ಪ್ರತಿಕ್ರಿಯಿಸಿದ ಅವರು 'ಸರ್ಕಾರ
ಅನ್ನುವಂತದ್ದು ಕಾನೂನು ಸುವ್ಯವಸ್ಥೆ
ಹಾಗೂ ಸಂವಿಧಾನಾತ್ಮಕವಾಗಿ
ರಚಿಸಲ್ಪಟ್ಟಿದೆ. ಹಿಜಾಬ್ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶ ಏನಿದೆ ಅದರ ಪ್ರಕಾರವಾಗಿಯೇ ಆದೇಶ ಪಾಲನೆ ಆಗುತ್ತದೆ. ನಾವು ೈಸಂವಿಧಾನಬದ್ಧವಾಗಿ ಕಾನೂನು
ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇವೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು,ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ
ಮಾಡುತ್ತಿದ್ದೇವೆ ಎಂದು ಹೇಳಿದರು.
ಅವರು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಾಗೂ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸುವ ಉದ್ದೇಶದಿಂದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
0 Comments