ಬೆಳಗಾವಿ: ಇತ್ತೀಚೆಗಷ್ಟೇ ಆತ್ಮಹತ್ಯೆಗೊಂಡ ಸಂತೋಷ ಪಾಟೀಲರ ಸಾವಿನ ಹಿಂದೆನಿಗೂಢ ರಹಸ್ಯವಿದ್ದು, ನನ್ನ ಸಿ.ಡಿ ಪ್ರಕರಣದಲ್ಲಿ ಇರುವ ಮಹಾನಾಯಕರ ತಂಡವೇ ಷಡ್ಯಂತರ ರೂಪಿಸಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಂಶಯ ವ್ಯಕ್ತಪಡಿಸಿದರು.
ಅವರು ಬಡಸ ಗ್ರಾಮದಲ್ಲಿನ ಸಂತೋಷ ಪಾಟೀಲ ಅವರ ಮನೆಗೆ ಗುರುವಾರದಂದು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು
'ನನ್ನ ಸಿ.ಡಿ ತಯಾರಿಸಿದ ಮಹಾನಾಯಕ ಹಾಗೂ ಅವರ ತಂಡ ಸಂತೋಷ ಪಾಟೀಲ ಪ್ರಕರಣದ ಹಿಂದಿದೆ ಎಂದು ಗಂಭೀರ ಆರೋಪ ಮಾಡಿದರು.
ಮಹಾನಾಯಕನ ತಂಡದ ಕುತಂತ್ರದ ಎಲ್ಲ ದಾಖಲೆಗಳು ನನ್ನ ಬಳಿಯಿವೆ. ಇದರ ಬಗ್ಗೆ ಪಕ್ಷದ ವರಿಷ್ಠರ ಜೊತೆಗೆ ಚರ್ಚೆ ಮಾಡುತ್ತೇನೆ. ಅವರು ಸಮ್ಮತಿ ನೀಡಿದರೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಪಡಿಸುತ್ತೇನೆ ಎಂದು ಹೊಸ
ಬಾಂಬ್ ಸಿಡಿಸಿದರು. 'ಕರೆಪ್ಪನ್ ಮುಕ್ತ ಕರ್ನಾಟಕ ಮಿಷನ್ ಕಾಂಗ್ರೆಸ್
ಸಂತೋಷ ಪಾಟೀಲ ನನಗೆ ಗೊತ್ತು. ಆತ ನನ್ನ ಹಳೆಯ ಕಾರ್ಯಕರ್ತ. ಸಂತೋಷ ಹಾಗೂ ನನ್ನ ಸಿ.ಡಿ
ಪ್ರಕರಣಗಳನ್ನು ಸಿಬಿಐ ಗೆ ವಹಿಸಲಿ ಎಂದು ರಮೇಶ ಜಾರಕಿಹೊಳಿ ಒತ್ತಾಯಿಸಿದರು.
ಸಂತೋಷ ಪ್ರಕರಣದ ವಿಚಾರದಲ್ಲಿ ಈಶ್ವರಪ್ಪ ಅವರು ರಾಜೀನಾಮೆ ಕೊಡಬಾರದು. ಇದರ ಹಿಂದೆ ಮಹಾನಾಯಕ ಇದ್ದಾನೆ. ಒಂದೇ ತಂಡದಿಂದ ಎಲ್ಲ ಕುತಂತ್ರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು
0 Comments