ಬೆಳ್ತಂಗಡಿ: ವ್ಯಕ್ತಿಯೊಬ್ಬರು ಆಲ್ಕೋಹಾಲ್ ಎಂದು ರಬ್ಬರ್ ಶೀಟ್‌ಗೆ ಬಳಸುವಂತ ಆ್ಯಸಿಡ್ ಕುಡಿದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದ ಹುಂಬಾಜೆಯ ಹೇರಲ್ ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಾಬು(62) ಎಂದು ಗುರುತಿಸಲಾಗಿದೆ. ಅವರು ಆ್ಯಸಿಡ್ ಹಾಗೂ ಮದ್ಯದ ಬಾಟಲಿ ತೆಗೆದುಕೊಂಡು ರಬ್ಬರ್ ಶೆಡ್‌ನಲ್ಲಿ ಇಟ್ಟಿದ್ದರು. ಬಳಿಕ ಅವರು ಮದ್ಯವೆಂದು ಭಾವಿಸಿ ಆ್ಯಸಿಡ್ ಕುಡಿದಿದ್ದರು. ಆ್ಯಸಿಡ್ ಕುಡಿದು ಅಸ್ವಸ್ಥಗೊಂಡ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರದಂದು ನಿಧನರಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments