ಕೋಟಿ ಚೆನ್ನಯ್ಯ ಯಕ್ಷಬಳಗ ವತಿಯಿಂದ ಯಕ್ಷಗಾನ ಪ್ರಸಂಗ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಒಬ್ಬ ಕಲಾವಿದ ಅನಿರೀಕ್ಷಿತ   ಮರಣ ಹೊಂದಿದಾಗ  ಅವನ ಕುಟುಂಬವನ್ನು ಪೋಷಿಸುವುದು  ನಿಜವಾದ ಧರ್ಮ ರಕ್ಷಣಾಕಾರ್ಯ ಎಂದು ಸದಾಶಿವ ನೆಲ್ಲಿಮಾರ್ ತಿಳಿಸಿದರು. 

ಅಶ್ವತ್ಥಪುರ ಸಮೀಪದ ಕರಿಕುಮೇರು  ಎಂಬಲ್ಲಿ  ಕೋಟಿ ಚೆನ್ನಯ್ಯ ಯಕ್ಷಬಳಗ  ಇದರ 7ನೇ ವರ್ಷದ  ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಗಾನ  ಕಾರ್ಯಕ್ರಮದಲ್ಲಿ ದಿವಂಗತ ವಾಮನ ಕುಲಾಲ್ ರವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಅವರು ಕೋಟಿ ಚೆನ್ನಯ ಯಕ್ಷ ಬಳಗ ಅಧ್ಯಕ್ಷ ಸುನಿಲ್ ದೇವಾಡಿಗ  ಒಬ್ಬ ಬಸ್ ಚಾಲಕನಾಗಿದ್ದು ನಿರಂತರ ಕಳೆದ 12 ವರ್ಷಗಳಿಂದ ವರ್ಷಕ್ಕೊಂದು ತುಳು ಪ್ರಸಂಗ ರಚಿಸಿ ಕಳೆದ ಏಳು ವರ್ಷಗಳಿಂದ  ವನದುರ್ಗ ದೇಂತಡ್ಕ ಮೇಳದವರಿಂದಲೇ  ಪ್ರಥಮ ಪ್ರಯೋಗ  ತಮ್ಮ ಸಂಘದ ವಾರ್ಷಿಕೋತ್ಸವ ಸಂದರ್ಭ  ಆಡಿಸುತ್ತಿರುವುದು ನಿರಂತರ ನಡೆದುಕೊಂಡು ಬಂದಿದೆ.

ಈ ವರ್ಷ ಅವರು ರಚಿಸಿದ   ಮುಚ್ಹೂರ್ದ ಮುತ್ತು ದೆಂತಡ್ಕ ಮೇಳದವರಿಂದ  ಕಲಾವಿದರ ಸ್ವಸಾಮರ್ಥ್ಯದಿಂದ ಅಮೋಘ ಪ್ರದರ್ಶಿಸಲ್ಪಟ್ಟು ಪ್ರಥಮ ಪ್ರಯೋಗ ಎಂಬ ಭಾವನೆಯೇ ಉಂಟಾಗಲಿಲ್ಲ.

ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ ವಾಮನ ಕುಲಾಲ್ ವೇಣೂರು ಅವರನುಡಿ ನಮನ ಜೊತೆಗೆ ಅವರ ಪತ್ನಿ  ಮತ್ತು ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ  ಧನಸಹಾಯ ಮಾಡಲಾಯಿತು.

ದೆಂಥಡ್ಕ ಮೇಳದ ಆರು ಹಿರಿಯ  ಭಾಗವತರಾದ  ಕಣಿಯೂರು ಸೂರ್ಯನಾರಾಯಣ ಭಟ್, ಮೋಹನ್ ಶೆಟ್ಟಿಗಾರ್,  ನಾರಾಯಣ ಮೂಲಡ್ಕ, ಭಾಗವತ ಶಿವಪ್ರಸಾದ್ ಎಡಪದವು, ಚಂದ್ರಶೇಖರ ಶೆಟ್ಟಿ ಬೆಟ್ಟಂಪಾಡಿ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಳತ್ತೂರು ಮಹಾಲಿಂಗೇಶ್ವರ ದೇವಳದ ಮೊಕ್ತೇಸರರಾದ ಸಂತೋಷ ಹೆಗಡೆ, ಲಯನ್ ಗಣೇಶ್ ಶೆಟ್ಟಿ ಮುಚ್ಚೂರು, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಅಶೋಕ್ ನಾಯಕ್ ಕೀಲೆ,  ಪ್ರಣವ್ ಕ್ಯಾಟರರ್ಸ್ ನ ಅಶೋಕ್,  ತೆಂಕಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ, ಮಿಜಾರು ಗುತ್ತು ಹರಿಪ್ರಸಾದ್ ಶೆಟ್ಟಿ, ವಿ.ಹೆಚ್.ಪಿ.  ಮುಖಂಡರಾದ ದಿನೇಶ್ ಮಿಜಾರು, ಸುಧಾಕರ ಪೂಜಾ ಉಪಸ್ಥಿತರಿದ್ದರು.

 ಸಂಘದ ಕಾರ್ಯದರ್ಶಿ ಯೂಸುಫ್ ಮಿಜಾರು ಸಭಾ ಕಾರ್ಯಕ್ರಮ ನಿರ್ವಹಿಸಿದರು




Post a Comment

0 Comments